Newsics.com
ಬೆಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಸಂಭವಿಸಿದ ಭಾರೀ ಭೂಕುಸಿತ ರಾಜ್ಯದ ಕೊಡಗಿಗೆ ಎಚ್ಚರಿಕೆ ಗಂಟೆಯಾಗಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ವ್ಯಾಪಕ ಅರಣ್ಯ ನಾಶ ಭೂಕುಸಿತಕ್ಕೆ ಪ್ರಮುಖ ಕಾರಣ. ಕಾಡು ಕಡಿದು ರಬ್ಬರ್ ಪ್ಲಾಂಟೇಶನ್ ಮಾಡಿದ ಕಾರಣ ಭೂಮಿಯ ಮಣ್ಣು ಸವೆದು ಹೋಗಿದೆ. ಇದರಿಂದ ಸಡಿಲಗೊಂಡ ಗುಡ್ಡಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ರಾಜ್ಯದ ಕೊಡಗಿನಲ್ಲೂ ಇದೇ ಪರಿಸ್ಥಿತಿ ಹೆಚ್ಚು ಕಡಿಮೆ ನಿರ್ಮಾಣವಾಗಿದೆ. ಬೆಟ್ಟಗಳ ತಪ್ಪಲಿನಲ್ಲಿ ರಬ್ಬರ್ ಗಿಡಗಳನ್ನು ಬೆಳೆಸಲಾಗುತ್ತಿದೆ. ನೀರು ಎಲೆಗಳ ಮೇಲೆ ಹರಿದು ಹೋಗುವುದರ ಬದಲಾಗಿ ಅಲ್ಲಿಯೇ ಇಂಗುತ್ತಿದೆ. ಇದು ಮಣ್ಣು ಸಡಿಲಗೊಳ್ಳಲು ಕಾರಣವಾಗಿದೆ.
ಭಾಗಮಂಡಲದಲ್ಲಿ ಈ ಹಿಂದೆ ಭೂಕುಸಿತ ಸಂಭವಿಸಿ ಅರ್ಚಕ ಕುಟುಂಬದ ಸದಸ್ಯರು ಪ್ರಾಣ ಕಳೆದುಕೊಂಡಿದ್ದರು. ರಾಜ್ಯ ಸರ್ಕಾರ ಮತ್ತು ಪರಿಸರ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖವಾಗಬೇಕಿದೆ ಎಂಬ ಕೂಗು ಬಲಗೊಂಡಿದೆ.