newsics.com
ಬೆಂಗಳೂರು: ಸ್ಯಾಂಡಲ್’ವುಡ್ ನಟ ಶರಣ್ ಅನಾರೋಗ್ಯ ಹಿನ್ನೆಲೆಯಲ್ಲಿ ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶರಣ್ ಆರೋಗ್ಯದಲ್ಲಿ ಅಂತಹ ದೊಡ್ಡ ಸಮಸ್ಯೆಯಿಲ್ಲ ಎಂದು ಶರಣ್ ಸಹೋದರಿ, ನಟಿ ಶ್ರುತಿ ತಿಳಿಸಿದ್ದಾರೆ.
ಶರಣ್ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಶ್ರುತಿ, ಅಣ್ಣನ ಆರೋಗ್ಯದಲ್ಲಿ ದೊಡ್ಡ ಸಮಸ್ಯೆಯೇನೂ ಆಗಿಲ್ಲ, ಕಿಡ್ನಿಯಲ್ಲಿ ಸ್ಟೋನ್ ಇರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ನಟ ಶರಣ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಎರಡು ದಿನಗಳಿಂದ ಶರಣ್’ಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಸಿನಿಮಾ ಚಿತ್ರೀಕರಣಕ್ಕೆ ಅಡ್ಡಿಯಾಗಬಾರದು ಎಂಬ ಕಾರಣದಿಂದಾಗಿ ಆತ ನೋವು ತಡೆದುಕೊಂಡಿದ್ದ. ಇಂದು ಶೂಟಿಂಗ್ ವೇಳೆ ನೋವು ಹೆಚ್ಚಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ವೈದ್ಯರು ಶರಣ್ ಗೆ ಕಿಡ್ನಿಯಲ್ಲಿ ಸ್ಟೋನ್ ಇದೆ ಎಂದಿದ್ದಾರೆ. ಚಿಕಿತ್ಸೆ ಬಳಿಕ ನಾಳೆ ಅಥವಾ ನಾಡಿದ್ದು ವಾಪಸ್ ಮನೆಗೆ ಬರುತ್ತಾನೆ. ಯಾವುದೇ ಸಮಸ್ಯೆಯೂ ಆತನಿಗೆ ಇಲ್ಲ ಎಂದು ಹೇಳಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ ʼಅವತಾರ ಪುರುಷʼ ಚಿತ್ರದ ಶೂಟಿಂಗ್ ನಟ ಶರಣ್ ಅಸ್ವಸ್ಥರಾಗಿದ್ದರು.
ದೇಶದಲ್ಲೇ ಬ್ಯಾಟರಿ ಉತ್ಪಾದನೆ; ಎಲೆಕ್ಟ್ರಿಕ್ ವಾಹನ ಅಗ್ಗ ಸಾಧ್ಯತೆ
ಪ್ರಶ್ನೆಪತ್ರಿಕೆ ಸಿಗದೆ ಬಿಎಸ್ಸಿ ಪರೀಕ್ಷೆ ಎರಡೂವರೆ ಗಂಟೆ ವಿಳಂಬ!
ಲಂಚ ಪಡೆಯುತ್ತಿದ್ದ 3 ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಿದ ಸಿಬಿಐ