newsics.com
ಬೆಂಗಳೂರು: ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಇದೀಗ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆ.
ಕೆಎಂಎಫ್ ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ. 15 ರಷ್ಟು ದರ ಏರಿಕೆಯಾಗಿದೆ. ಹಾಲು, ಮೊಸರು ದರ ಏರಿಕೆಗೂ ಮೊದಲೇ ಹಂತಹಂತವಾಗಿ ಉತ್ಪನ್ನಗಳ ಬೆಲೆಯನ್ನ ಕೆಎಂಎಫ್ ಏರಿಸಿದೆ.
ನವೆಂಬರ್ 24 ರಂದು ಕೆಎಂಎಫ್ ನಂದಿನಿ ಹಾಲು, ಮೊಸರಿನ ದರದ ಮೇಲೆ 2 ರೂಪಾಯಿ ಏರಿಸಿತ್ತು. ಅಲ್ಲದೇ ಆ ಸಂಪೂರ್ಣ ಹಣವನ್ನು ರೈತರಿಗೆ ನೀಡುವುದಾಗಿ ಕೆಎಂಎಫ್ ತಿಳಿಸಿತ್ತು.