ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇರಳದ ಕೊಚ್ಚಿಯಲ್ಲಿ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆ ರಾಜ್ಯದಲ್ಲಿ ಕೂಡ ಕಂಪನ ಸೃಷ್ಟಿಸಿದೆ. ಪರಿಸರ ಸಂಬಂಧಿತ ಕಾನೂನನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದರೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಕರಾವಳಿ ತೀರ ನಿಯಂತ್ರಣ ಕಾಯ್ದೆ ಅತ್ಯಂತ ಕಠಿಣ ಕಾನೂನು. ಇದರಲ್ಲಿ ಯಾವುದೇ ಅಂಶಗಳನ್ನು ಉಲ್ಲಂಘಿಸಿದರೂ ದಂಡನೆ ಕಟ್ಟಿಟ್ಟ ಬುತ್ತಿ. ಇದುವೆ ಕಾನೂನು ಉಲ್ಲಂಘಿಸಿದವರ ಎದೆಯಲ್ಲಿ ನಡುಕ ಸೃಷ್ಟಿಸಿದೆ.