ಮಡಿಕೇರಿ: ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ಬಾರಿ ಕುಶಾಲನಗರದ ಲೇಖಕಿ, ಕವಯಿತ್ರಿ ಕೆ.ಕೆ. ಸುನಿತಾ ಅವರಿಗೆ ಲಭಿಸಿದೆ. ಸುನಿತಾ ಅವರ `ನೆನಪಿನ ಹೆಜ್ಜೆಗೆ ಗೆಜ್ಜೆಯ ಕಟ್ಟಿ’ ಕಥಾಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಡಿಸೆಂಬರ್ 28 ರಂದು ಮಡಿಕೇರಿಯ ಅರಸು ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರಮ್ಮ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪರಿಷತ್ ಆಹ್ವಾನದ ಮೇರೆಗೆ ಪ್ರಶಸ್ತಿ ಬಯಸಿ ಐದು ಪುಸ್ತಕಗಳು ಬಂದಿದ್ದವು. ಈ ಪೈಕಿ ಸುನಿತಾ ಅವರ ಕೃತಿ ಆಯ್ಕೆಯಾಗಿದೆ ಎಂದು ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ.
ರಂಗಸಮುದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸುನಿತಾ ಅವರು ಅನುವಾದ ಸಾಹಿತ್ಯದಲ್ಲಿ ಹೆಸರಾಗಿದ್ದು ಹಲವು ಕೃತಿಗಳನ್ನು ಹೊರತಂದಿದ್ದಾರೆ. ರಾಜ್ಯದ ಪ್ರಮುಖ ಅನುವಾದಕರಲ್ಲಿ ಸುನಿತಾ ಕೂಡ ಒಬ್ಬರು. ಹಿರಿಯ ಸಾಹಿತಿ ಕಣಿವೆ ಭಾರದ್ವಾಜ್ ಆನಂದತೀರ್ಥ, ಕಿಗ್ಗಾಲು ಗಿರೀಶ್, ಡಾ. ಕೋರನ ಸರಸ್ವತಿ ಪ್ರಶಸ್ತಿ ತೀರ್ಪುಗಾರರಾಗಿದ್ದರು.
ಕತೆಗಾರ್ತಿ ಸುನಿತಾಗೆ ಕೊಡಗಿನ ಗೌರಮ್ಮ ಪ್ರಶಸ್ತಿ
Follow Us