newsics.com
ಉಡುಪಿ: ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಪುರಸ್ಕೃತ ಡಾ.ಎಸ್.ಎಲ್ ಭೈರಪ್ಪ ಅವರಿಗೆ ಪ್ರತಿಷ್ಠಿತ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ-2020 ಲಭಿಸಿದೆ.
ಶಿವರಾಮ ಕಾರಂತರ ಜನ್ಮದಿನವಾದ ಅಕ್ಟೋಬರ್ 10 ರಂದು ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತ ಅವರ ಹೆಸರಿನಲ್ಲಿ ಕೋಟ ಗ್ರಾಮ ಪಂಚಾಯತ್ ವಿವಿಧ ಕ್ಷೇತ್ರಗಳ ಸಾಧಕರಿಗೆ ರಜತ ಪ್ರಶಸ್ತಿ ನೀಡುತ್ತಿರುವುದು ದೇಶದಲ್ಲೆ ಮೊದಲು. ಕಳೆದ 15 ವರ್ಷಗಳಲ್ಲಿ ವೀರಪ್ಪ ಮೊಯ್ಲಿ, ನ್ಯಾ.ವೆಂಕಟಾಚಲಯ್ಯ, ಗಿರೀಶ್ ಕಾಸರವಳ್ಳಿ, ರವಿ ಬೆಳಗೆರೆ, ಡಾ.ಮೋಹನ್ ಆಳ್ವ, ಸಾಲುಮರದ ತಿಮ್ಮಕ್ಕ ಸಹಿತ 15 ಸಾಧಕರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಭೈರಪ್ಪಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ
Follow Us