newsics.com
ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಾಮರಸ್ಯದ ಸೇತುವೆಯಂತಿದ್ದ ಅಣ್ಣಾ ಡಿಎಂಕೆ ನಾಯಕ ಕೃಷ್ಣರಾಜು (72) ಕೊರೋನಾಗೆ ಬಲಿಯಾಗಿದ್ದಾರೆ.
ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶನಿವಾರ (ನ.7) ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಬೆಂಗಳೂರು ಎಜ್ಯುಕೇಷನ್ ಟ್ರಸ್ಟ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ‘ಅಮ್ಮನ ಸಾಧನೆಯ ಕ್ರಾಂತಿ’ ಎಂಬ ಪುಸ್ತಕವನ್ನು ಕನ್ನಡ ಮತ್ತು ತಮಿಳಿನಲ್ಲಿ ಬರೆದಿದ್ದು ತೆಲುಗು, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ. ‘ಭಾರತರತ್ನ ಡಾಕ್ಟರ್ ಎಂಜಿಆರ್’ ಎಂಬ ಮತ್ತೊಂದು ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ. ಈ ಎರಡೂ ಪುಸ್ತಕಗಳನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಬಿಡುಗಡೆ ಮಾಡಿದ್ದರು.
ಜಯಲಲಿತಾ ಮತ್ತು ಎಂಜಿಆರ್ ಅವರ ಜತೆ ಹತ್ತಿರದ ಒಡನಾಟ ಹೊಂದಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಮಾದರಿಯಲ್ಲೇ ಬೆಂಗಳೂರು ಕಲಾಸಿಪಾಳ್ಯದಲ್ಲಿ ಒಂದು ರೂಪಾಯಿಗೆ ಇಡ್ಲಿ ಯೋಜನೆಯನ್ನು ರೂಪಿಸಿದ್ದರು. ಅಖಿಲ ಭಾರತ ಅಣ್ಣಾ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಪರಪ್ಪನ ಅಗ್ರಹಾರಕ್ಕೆ ಜಯಲಲಿತಾ ಅವರು ಬಂದಿದ್ದಾಗ ಕೃಷ್ಣರಾಜು ಅವರನ್ನು ಕಂಡಕೂಡಲೇ ರಸ್ತೆಯಲ್ಲೇ ಕಾರು ನಿಲ್ಲಿಸಿ ಮಾತನಾಡಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ಡಾ.ಸುಧಾ ಆಪ್ತೆ ರೇಣುಕಾ ಮನೆಯಲ್ಲಿ 250 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ!
ಬಿಹಾರ ಚುನಾವಣೆ; 1,157 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ
ಟ್ರಂಪ್ ಸಂಸಾರದಲ್ಲಿ ಬಿರುಕು; ಮೆಲೆನಿಯಾ ಡಿವೋರ್ಸ್ ಸಾಧ್ಯತೆ
ರಿಯಾದ್-ಬೆಂಗಳೂರು ವಿಮಾನದಲ್ಲಿ ಹೈಡ್ರಾಲಿಕ್ ಸೋರಿಕೆ