newsics.com
ಮಂಗಳೂರು: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇವರ ವಿವಿಧ ಸೇವಾ ಕಾರ್ಯಗಳು ನಾಳೆಯಿಂದ (ಸೆ.14) ಆರಂಭಗೊಳ್ಳಲಿದ್ದು, ಕೆಲ ನಿಯಮಗಳ ಜತೆ ಸೇವೆ ಆರಂಭಿಸಲು ಮುಜರಾಯಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಸೇರಿದಂತೆ ಎಲ್ಲ ಸೇವೆಗಳು ಷರತ್ತುಗಳೊಂದಿಗೆ ಆರಂಭವಾಗಲಿದೆ. ಹಲವು ನಿಯಮಗಳೊಂದಿಗೆ ಸೇವೆಗಳನ್ನು ನಡೆಸಲು ಮುಜರಾಯಿ ಇಲಾಖೆ ಅನುಮತಿ ನೀಡಿದೆ. ಸೇವಾರ್ಥಿಗಳಿಗೆ ಮಾತ್ರ ಭೋಜನ ವ್ಯವಸ್ಥೆ ಇದೆ. ದೇವಾಲಯ ಬೆಳಗ್ಗೆ 6.30 ರಿಂದ 2.30 ರವರೆಗೆ ಹಾಗೂ ಮಧ್ಯಾಹ್ನ 3.30 ರಿಂದ ರಾತ್ರಿ 8 ಗಂಟೆಯವರೆಗೆ ಬಾಗಿಲು ತೆರೆಯಲಿದೆ.
ಒಂದು ದಿನ ಒಟ್ಟು 30 ಜನರಿಗೆ ಮಾತ್ರ ಸರ್ಪಸಂಸ್ಕಾರ ಹಾಗೂ ಆಶ್ಲೇಷಾ ಬಲಿ ಮಾಡಲು ಅವಕಾಶವಿದ್ದು, ಸೇವಾರ್ಥಿಗಳ ಒಂದು ಟಿಕೆಟ್ ನಲ್ಲಿ ಇಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಡಳಿತಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.
ಮಹಾಪೂಜೆ ಮತ್ತು ಪಂಚಾಮೃತ ಸೇವೆಯ 10 ಟಿಕೇಟ್ ನೀಡಲಾಗುತ್ತಿದ್ದು, ಸರ್ಪಸಂಸ್ಕಾರ ಸೇವೆಯವರಿಗೆ ಎರಡು ದಿನ ಹಾಗೂ ಉಳಿದವರಿಗೆ ಒಂದು ದಿನ ದೇವಾಲಯದ ವಸತಿಗೃಹದಲ್ಲಿ ವಾಸಿಸಲು ಅವಕಾಶವಿದೆ ಎಂದು ರೂಪಾ ತಿಳಿಸಿದ್ದಾರೆ.
ಕಾನೂನು ಪದವಿ ವ್ಯಾಸಂಗ; ಕೋರ್ಟ್ ಮೆಟ್ಟಿಲೇರಿದ 77ರ ಅಜ್ಜಿ!
2.17 ಕೋಟಿ ಮೌಲ್ಯದ 6.1 ಕೆಜಿ ಚರಸ್ ವಶ, ನೇಪಾಳಿಗನ ಸೆರೆ