Thursday, June 17, 2021

ರಾಜ್ಯ ಸರ್ಕಾರದ ವಿರುದ್ಧ ಘರ್ಜಿಸುತ್ತಿರುವ ಕುಮಾರಸ್ವಾಮಿ, ಮೌನಕ್ಕೆ ಶರಣಾದ ಕಾಂಗ್ರೆಸ್ ನಾಯಕರು

ನವದೆಹಲಿ:  ರಾಜ್ಯ ವಿಧಾನಸಭೆಗೆ ನಡೆದ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಜೆಡಿಎಸ್ ಪಕ್ಷದಲ್ಲಿ ಅದರಲ್ಲೂ ಮುಖ್ಯವಾಗಿ ಕುಮಾರ ಸ್ವಾಮಿ ಅವರಲ್ಲಿ ಬಹಳ ಬದಲಾವಣೆ ಕಾಣಿಸಿಕೊಂಡಿದೆ. ಅಲ್ಲಿಯ ತನಕ ರಾಜ್ಯ ಸರ್ಕಾರವನ್ನು ಟೀಕಿಸುವ ಸಂದರ್ಭದಲ್ಲಿ ಒಂದು ಲಕ್ಷ್ಮಣ ರೇಖೆಯನ್ನು ತಮ್ಮಗೆ ತಾವೇ ಹಾಕಿಕೊಂಡಿದ್ದರು. ಉಪ ಚುನಾವಣೆಯ ಬಳಿಕ ಚಿತ್ರಣ ಬದಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ. ಯಾರ ಬಾಹ್ಯ ಬೆಂಬಲದ ಅಗತ್ಯ ಕೂಡ ಇಲ್ಲ. ಬದಲಾದ ರಾಜಕೀಯ ಚಿತ್ರಣದಿಂದಾಗಿ  ಕುಮಾರಸ್ವಾಮಿ ಒದಗಿ ಬಂದ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮಂಗಳೂರು ಗಲಭೆಯಾಗಿರ ಬಹುದು , ಬೆಂಗಳೂರು ಪ್ರತಿಭಟನೆಯಾಗಿರಬಹುದು. ಕುಮಾರಸ್ವಾಮಿ ವಾಗ್ಬಾಣ ಬಿರುಸುಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತೋರಿಕೆಯ ವಿರೋಧಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸುತ್ತಿದ್ದಾರೆಯೇ ಎಂಬ  ಸಂಶಯ ಕೂಡ ತಲೆದೋರಿದೆ. ಕುಮಾರಸ್ವಾಮಿ ಯಾವುದನ್ನು ಮಾತನಾಡಿದರೂ ಅದರ ಹಿಂದೆ ರಾಜಕೀಯ ಲೆಕ್ಕಚಾರವಂತೂ ಇದ್ದೇ ಇರುತ್ತೆ. ಯಾಕೆಂದರೆ ಅವರು ದೇವೇಗೌಡರ  ರಾಜಕೀಯ ಗರಡಿಯಲ್ಲಿ ಪಳಗಿರುವ ರಾಜಕೀಯ ನಾಯಕ.

ಮತ್ತಷ್ಟು ಸುದ್ದಿಗಳು

Latest News

ಜಗತ್ತಿನ ಮೂರನೇ ಅತಿ ದೊಡ್ಡ ವಜ್ರ ಪತ್ತೆ

newsics.com ಬೋಟ್ಸ್ವಾನ: ಜಗತ್ತಿನ‌ ಮೂರನೇ ಅತಿ ದೊಡ್ಡ ವಜ್ರ ಗ್ಯಾಬರೋನ್ ನಲ್ಲಿ ಪತ್ತೆಯಾಗಿದೆ. ಐದು ದಶಕಗಳಿಂದ ವಜ್ರದ ಗಣಿಗಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಡಿ ಬೀರ್ಸ್ ಕಂಪನಿಯ ವಿಭಾಗವಾದ...

ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ವಿಚಾರಣೆ

newsics.com ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ವಿಚಾರಣೆ ನ಼಼ಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಮಾಜಿ ಎನ್ ಕೌಂಟರ್...

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

newsics.com ಬೆಂಗಳೂರು: ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಎಲ್ಇಡಿ ಟಿವಿಗಳ ಬೆಲೆಯಲ್ಲೆ ಶೇ.3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ಯಾನಾಸೋನಿಕ್, ಹೈಯರ್‌ ಹಾಗೂ ಥಾಮ್ಸನ್ ಬ್ರಾಂಡ್‌ಗಳು ತಮ್ಮ ಟಿವಿ ಉತ್ಪನ್ನಗಳ ಬೆಲೆ ಹೆಚ್ಚಿಸಲು ಗಂಭೀರ...
- Advertisement -
error: Content is protected !!