ಬೆಳಗಾವಿಯಲ್ಲಿ ಚಿರತೆ ದಾಳಿ : ಓರ್ವ ಕಾರ್ಮಿಕನಿಗೆ ಗಾಯ

newsics.com ಬೆಳಗಾವಿ:  ರಾಜ್ಯದ ಬೆಳಗಾವಿ ನಗರದಲ್ಲಿ ಚಿರತೆ ಎಂಟ್ರಿ ಕೊಟ್ಟಿದೆ. ಜಾಧವ್ ನಗರದಲ್ಲಿ  ಚಿರತೆ ಕಾಣಿಸಿಕೊಂಡಿದ್ದು  ಕಟ್ಟಡ ಕಾರ್ಮಿಕನೊಬ್ಬನ ಮೇಲೆ  ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ. ಇದೀಗ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನುಗಳನ್ನು ಇರಿಸಿದ್ದಾರೆ. ಅದರಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿದೆ. ಚಿರತೆ ದಾಳಿಯಿಂದ ಗಾಯಗೊಂಡಿರುವ ಕಾರ್ಮಿಕ ಲಕ್ಷ್ಮಣ್ ಎಂಬವರನ್ನು ಇದೀಗ ಆಸ್ಪತ್ರೆಗೆ ಸೇರಿಸಲಾಗಿದೆ. ಹಿರಿಯ ಅರಣ್ಯಾಧಿಕಾರಿಗಳು ಜಾಧವ್ ನಗರಕ್ಕೆ ಭೇಟಿ್ ನೀಡಿದ್ದು, ಚಿರತೆ ಹಿಡಿಯಲು ಎಲ್ಲ ಪ್ರಯತ್ನ ನಡೆಸುವುದಾಗಿ ಜನರಿಗೆ ಧೈರ್ಯ ತುಂಬಿದ್ದಾರೆ