newsics.com
ಬೆಳಗಾವಿ: ಚಿರತೆ ದಾಳಿ ಭೀತಿಯಿಂದ ಬೆಳಗಾವಿಯ ಕ್ಯಾಂಪ್ ಪ್ರದೇಶದ ಸುತ್ತಮುತ್ತ ಇರುವ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಚಿರತೆ ಗಾಲ್ಫ್ ಮೈದಾನದಲ್ಲಿ ಅಡಗಿ ಕುಳಿತಿದೆ ಎಂದು ಶಂಕಿಸಲಾಗಿದೆ.
ಆಗಸ್ಟ್ 5ರಂದು ಮೊದಲ ಬಾರಿ ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದುವರೆಗೆ ಫಲ ನೀಡಿಲ್ಲ.
ಗಾಲ್ಫ್ ಮೈದಾನದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಾಧವ ನಗರ, ಕುವೆಂಪು ನಗರ ಮತ್ತು ಕ್ಯಾಂಪ್ ಪ್ರದೇಶದ ಶಾಲೆಗಳಿಗೆ ರಜೆ ನೀಡಲಾಗಿದೆ