newsics.com
ಪುತ್ರನ ಮೇಲೆ ಚಿರತೆ ದಾಳಿ ಮಾಡಿದ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಹೃದಯಾಘಾತದಿಂದ ತಾಯಿ ಮೃತಪಟ್ಟ ಘಟನೆಯೊಂದು ಬೆಳಗಾವಿ ತಾಲೂಕಿನ ಖನಗಾವಿ ಕೆ.ಹೆಚ್ ಗ್ರಾಮದಲ್ಲಿ ನಡೆದಿದೆ.
ಕಟ್ಟಡ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಕಾರ್ಮಿಕ ಸಿದರಾಯಿ ಮೇಲೆ ಚಿರತೆ ದಾಳಿ ನಡೆಸಿತ್ತು. ಮನೆಯೊಂದರ ಕಾಂಪೌಂಡ್ನಿಂದ ಹಾರಿ ಬಂದ ಚಿರತೆ ಕಾರ್ಮಿಕನ ಬೆನ್ನನ್ನು ಪರಚಿತ್ತು. ಗಾಯಗೊಂಡಿದ್ದ ಸಿದರಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ಆದರೆ ಪುತ್ರನಿಗೆ ಚಿರತೆ ದಾಳಿ ಮಾಡಿದೆ ಎಂಬ ಸುದ್ದಿ ಕೇಳುತ್ತಲೇ 65 ವರ್ಷದ ಶಾಂತಾ ಮಿರಜಕರ್ ಹೃದಯಾಘಾತದಿಂದ ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಭದ್ರತಾ ದೃಷ್ಟಿಯಿಂದ ಕಾಮನ್ವೆಲ್ತ್ ಕುಸ್ತಿ ಪಂದ್ಯ ನಡೆಯುವ ಸ್ಥಳವನ್ನು ಖಾಲಿ ಮಾಡಿದ ಸಿಬ್ಬಂದಿ