ಬೆಂಗಳೂರು: ಸರ್ಕಾರ ಹತ್ತಾರು ಬಾರಿ ಸೂಚನೆ ನೀಡಿದ ಬಳಿಕವೂ ಕೊವಿಡ್-19 ರೋಗಿಗಳಿಗೆ ಬೆಡ್’ಗಳನ್ನು ಮೀಸಲಿರಿಸದ ನಗರದ ದಕ್ಷಿಣ ಭಾಗದ 19 ಆಸ್ಪತ್ರೆಗಳ ಪರವಾನಗಿಯನ್ನು ರದ್ದುಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ನಗರದ ಪ್ರತಿಷ್ಠಿತ ಎಸ್.ಸಿ.ಜಿ ಹಾಸ್ಪಿಟಲ್ ಸೇರಿದಂತೆ ಒಟ್ಟು 19 ಆಸ್ಪತ್ರೆಗಳ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಈ ಬಗ್ಗೆ ಆಸ್ಪತ್ರೆ ಮುಂಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಿಸಲಾಗಿದೆ.
ಬಸವನಗುಡಿ ವ್ಯಾಪ್ತಿಯ ವಿನಾಯಕ ಹಾಸ್ಪಿಟಲ್, ಅನುಗ್ರಹ ವಿಠ್ಠಲ ಹಾಸ್ಪಿಟಲ್, ಪ್ರಶಾಂತ್ ಆಸ್ಪತ್ರೆ, ರಾಧಾಕೃಷ್ಣ್ ಆಸ್ಪತ್ರೆ, ವಿಜಯನಗರದ ಗುರುಶ್ರೀ ಆಸ್ಪತ್ರೆ, ಕಾಲಭೈರವೇಶ್ವರ್ ಆಸ್ಪತ್ರೆ, ಪದ್ಮಶ್ರೀ ಆಸ್ಪತ್ರೆ, ಮಾರುತಿ ಹಾಸ್ಪಿಟಲ್, ಪ್ರೊಮೆಡ್ ಹಾಸ್ಪಿಟಲ್, ಎನ್.ಯು. ಹಾಸ್ಪಿಟಲ್, ದೀಪಕ್ ಆಸ್ಪತ್ರೆ, ಸೇವಾ ಕ್ಷೇತ್ರ ಹಾಸ್ಪಿಟಲ್, ಗಂಗೋತ್ರಿ ಹಾಸ್ಪಿಟಲ್, ಅಕ್ಕೂರ್ ಆಸ್ಪತ್ರೆ, ಕಾರಂತ್ ಹಾಸ್ಪಿಟಲ್ ಸೇರಿದಂತೆ 19 ಹಾಸ್ಪಿಟಲ್ ಗಳ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಬಿಬಿಎಂಪಿ ದಕ್ಷಿಣ ಭಾಗದ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಜಯನಗರ ಹಾಗೂ ಬನ್ನೇರಘಟ್ಟ ರಸ್ತೆಯ ಎರಡು ಹಾಸ್ಪಿಟಲ್’ಗಳ ಒಪಿಡಿಯನ್ನು 48 ಗಂಟೆ ಕಾಲ ಬಂದ್ ಮಾಡಲಾಗಿತ್ತು.
ಬೆಡ್ ಕೊಡದ ಬೆಂಗಳೂರಿನ 19 ಆಸ್ಪತ್ರೆಗಳ ಪರವಾನಗಿ ರದ್ದು
Follow Us