ಮದ್ಯ ಮಾರಾಟ; ಎರಡನೇ ದಿನ 197 ಕೋಟಿ ರೂ. ಸಂಗ್ರಹ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ (ಮೇ 5) ಒಂದೇ ದಿನ ಮದ್ಯ ಮಾರಾಟದಿಂದ 197 ಕೋಟಿ ರೂ. ಸಂಗ್ರಹವಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆ ತಿಳಿಸಿದೆ.
ದೇಶೀಯ ಮದ್ಯ (IML) 36 ಲಕ್ಷ ಲೀಟರ್ ಗೂ ಹೆಚ್ಚು ಮಾರಾಟವಾಗಿದೆ. ಅದರ ಬೆಲೆ 182 ಕೋಟಿ ರುಪಾಯಿ. ಇನ್ನು 7 ಲಕ್ಷ ಲೀಟರ್’ಗೂ ಹೆಚ್ಚು, ಅಂದರೆ 15 ಕೊಟಿ ಮೌಲ್ಯದ ಬಿಯರ್ ಮಂಗಳವಾರ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಖಾತ್ರಿ ಪಡಿಸಿದೆ.
ಸೋಮವಾರ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗಿತ್ತು. ಎರಡು ದಿನದಲ್ಲಿ ಒಟ್ಟು 242 ಕೋಟಿ ರುಪಾಯಿ ಹಣ ಸಂಗ್ರಹ ಆಗಿದೆ. ರಾಜ್ಯದ 4200 ಸ್ಟೋರ್ ಗಳಿಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದಿಂದ ರಾಜ್ಯದಲ್ಲಿ 21,450 ಕೋಟಿ ರುಪಾಯಿ ಸಂಗ್ರಹವಾಗಿದೆ. ಕರ್ನಾಟಕ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ 22,700 ಕೋಟಿ ಆದಾಯ ಸಂಗ್ರಹ ಗುರಿ ಹಾಕಿಕೊಂಡಿದೆ.
ಈ ಮಧ್ಯೆ, ದೆಹಲಿ ಸರ್ಕಾರವು ಮದ್ಯ ಮಾರಾಟದ ಮೇಲೆ 70 ಪರ್ಸೆಂಟ್ ವಿಶೇಷ ಕೊರೋನಾ ಶುಲ್ಕ ವಿಧಿಸಿದ್ದು, ಆ ಮೂಲಕ ಆದಾಯ ಸಂಗ್ರಹಕ್ಕೆ ಮುಂದಾಗಿದೆ. ಆದರೆ, ದೆಹಲಿಯಲ್ಲಿ ಮದ್ಯ ಮಾರಾಟ ಮಳಿಗೆಗಳ ಮುಂದೆ ಜನಜಂಗುಳಿಯಿಂದ ಹಲವೆಡೆ ಮಳಿಗೆಗಳನ್ನು ಮುಚ್ಚಲಾಗಿದೆ.

LEAVE A REPLY

Please enter your comment!
Please enter your name here

Read More

ಶುಭದಾತೆ ಕಾಳರಾತ್ರಿ…

ರೂಪದಲ್ಲಿ ಭಯಂಕರವೆನಿಸಿದರೂ ಜಗನ್ಮಾತೆ ದುರ್ಗೆಯ ಏಳನೇ ಶಕ್ತಿ ಕಾಳರಾತ್ರಿ ಆರಾಧಕನಿಗೆ ಶುಭವನ್ನೇ ನೀಡುವವಳು. ಇದೇ ಕಾರಣಕ್ಕೆ ಇವಳು ಶುಭಂಕರಿ. ಕೈಗಳಲ್ಲಿ ವರಮುದ್ರೆ ಇಂದ ಎಲ್ಲರಿಗೆ ವರದಾನ ನೀಡುತ್ತಾ, ಅಭಯ ಮುದ್ರೆ,...

ಹರೀರಿ ಮತ್ತೆ ಲೆಬನಾನ್ ಪ್ರಧಾನಿ

newsics.comಬೈರೂತ್ (ಲೆಬನಾನ್): ಲೆಬನಾನ್ ಅಧ್ಯಕ್ಷ ಮೈಕಲ್ ಔನ್ ಮಾಜಿ ಪ್ರಧಾನಿ ಸಅದ್ ಅಲ್-ಹರೀರಿಯನ್ನು ಗುರುವಾರ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ.ನೂತನ ಪ್ರಧಾನಿ ಹುದ್ದೆಗಾಗಿ ಅಧ್ಯಕ್ಷರು ಸಂಸದರೊಂದಿಗೆ ನಡೆಸಿದ ಸಮಾಲೋಚನೆಯ ವೇಳೆ, ಹೆಚ್ಚಿನ...

ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ ಯಶಸ್ವಿ

newsics.comನವದೆಹಲಿ: ಕೊರೋನಾ ಲಸಿಕೆ ಕೋವ್ಯಾಕ್ಸಿನ್ ನ ಮೂರನೇ ಹಂತದ ಪ್ರಯೋಗವೂ ಯಶಸ್ವಿಯಾಗಿದೆ.ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಜಂಟಿಯಾಗಿ ಈ ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಹೈದರಾಬಾದ್...

Recent

error: Content is protected !!