newsics.com
ಬೀದರ್: ಶೀಘ್ರವಾಗಿ ಗುರಿ ತಲುಪಬೇಕು ಎಂದು ಸಾಹಸ ಮಾಡಲು ಹೊರಟ್ಟಿದ್ದ ಲಾರಿ ಚಾಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಈ ಘಟನೆ ವರದಿಯಾಗಿದೆ.
ಲಾರಿ ಚಾಲಕ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ರೈಲ್ವೆ ಕ್ರಾಸಿಂಗ್ ದಾಟಲು ಪ್ರಯತ್ನಿಸಿದ್ದ. ಒಂದು ಗೇಟ್ ದಾಟಿ ಮುಂದೆ ಸಾಗಿದಾಗ ಎರಡನೆ ಗೇಟ್ ಬಂದ್ ಮಾಡಲಾಯಿತು. ಇದರಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಲು ಸಾಧ್ಯವಾಗದೆ ಹಳಿಯ ಮೇಲೆ ನಿಲ್ಲಿಸಬೇಕಾಯಿತು.
ಎಕ್ಸ್ ಪ್ರೆಸ್ ರೈಲು ಅತೀ ವೇಗವಾಗಿ ಅದೇ ಸಮಯಕ್ಕೆ ಬರುತ್ತಿತ್ತು. ಕೂಡಲೇ ಅಪಾಯದ ಮುನ್ಸೂಚನೆ ನೀಡಲಾಯಿತು. ರೈಲಿನ ವೇಗ ತಗ್ಗಿಸಲಾದರೂ ಅದು ಹಳಿಯ ಮೇಲೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು.
ಭಾಲ್ಕಿ ಸಮೀಪದ ಹಲಬುರ್ಗಾ ದಲ್ಲಿ ಈ ಘಟನೆ ಸಂಭವಿಸಿದೆ. ಇದೀಗ ಲಾರಿ ಚಾಲಕನನ್ನು ಬಂಧಿಸಲಾಗಿದೆ.