newsics.com
ಬೆಂಗಳೂರು: ಕೊರೋನಾ ತಡೆಗೆ ಸಿಎಂ ಬೊಮ್ಮಾಯಿ ಅಧಿಕಾರಿಗಳೊಂದಿಗೆ ಇಂದ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು ಪಾಸಿಟಿವಿಟಿ ದರ 2 ಪರ್ಸೆಂಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ 9-12ನೇ ತರಗತಿವರೆಗಿನ ಶಾಲೆ ಓಪನ್ ಮಾಡಬಹುದು. ಪೋಷಕರು ಮತ್ತು ಶಿಕ್ಷಕರು ಕೊರೊನಾ ಲಸಿಕೆ ಪಡೆದಿರಬೇಕು ಎಂದು ಹೇಳಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಶಾಲೆ ಆರಂಭಿಸದಂತೆ ಸಿಎಂ ಸೂಚಿಸಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೂಡಗು, ಮೈಸೂರಿನಲ್ಲಿ ಶಾಲೆ ಆರಂಭ ಇಲ್ಲ. ಉಳಿದ ಜಿಲ್ಲೆಗಳಲ್ಲಿ 9-12ನೇ ತರಗತಿವರೆಗೆ ಆ 23ರಿಂದ ಶಾಲೆ ಆರಂಭವಾಗುತ್ತಿದ್ದು, ಒಂದು ವೇಳೆ ಸೋಂಕಿನ ಪ್ರಮಾಣ ಶೇ.2 ಕ್ಕಿಂತ ಹೆಚ್ಚಳವಾದರೆ ಶಾಲೆಗಳನ್ನು ಬಂದ್ ಮಾಡಿ ಸ್ಯಾನಿಟೈಸೇಷನ್ ಮಾಡಿ ಒಂದು ವಾರದ ಬಳಿಕ ಪುನಃ ಆರಂಭಿಸಲು ಸೂಚಿಸಲಾಗಿದೆ.
ಇನ್ನು, ಡೆಲ್ಟಾ ವೇರಿಯೆಂಟ್ ಪತ್ತೆಗೆ ಜಿನೋಮ್ ಲ್ಯಾಬ್ ಅಗತ್ಯವಾಗಿದ್ದು, ಮುಂದಿನ 3 ವಾರದಲ್ಲಿ 6 ಜಿನೋಮ್ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಲಾಗುವುದು. ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿಯಲ್ಲಿ ಜಿನೋಮ್ ಟೆಸ್ಟಿಂಗ್ ಲ್ಯಾಬ್ ಆರಂಭ ಮಾಡಲಾಗುವುದು ಎಂದು ಸಿಎಂ ಸಭೆ ಬಳಿಕ ಮಾಹಿತಿ ನೀಡಿದರು.