newsics.com
ಚಿಕ್ಕಮಗಳೂರು: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ತರಿಕೆರೆ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಹನ್ನೆರಡು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 48 ವರ್ಷದ ಬಾಷಾ ಬಾಲಕಿ ವಾಸ ಮಾಡುವ ಏರಿಯಾದವನೇ ಆಗಿದ್ದು, ಮನೆ ಬಳಿಯ ಅಂಗಡಿಗೆ ಹೋಗಿ ಮನೆಗೆ ಮರಳುತ್ತಿದ್ದ ಬಾಲಕಿಗೆ ತಿಂಡಿ ಕೊಡಿಸುವ ಆಮಿಷ ತೋರಿಸಿ ಬಾಷಾ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಬಾಲಕಿಯನ್ನು ಹುಡುಕಿಕೊಂಡು ಆಕೆಯ ಚಿಕ್ಕಮ್ಮ ಹೊರಟಿದ್ದಾಗ ಮನೆಯೊಂದರಲ್ಲಿ ಬಾಲಕಿ ಕೂಗಾಡುವ ಶಬ್ದ ಕೇಳಿಬಂದಿದೆ. ಬಾಲಕಿಯ ಚಿಕ್ಕಮ್ಮ ಆಕೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಬಾಲಕಿಯ ಚಿಕ್ಕಮ್ಮ ಕೂಗಾಡಿದ್ದರಿಂದ ಅಕ್ಕಪಕ್ಕದವರು ಸೇರಿ ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.