Tuesday, July 5, 2022

ಫೇಸ್ ಬುಕ್ ಫ್ರೆಂಡ್ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರು ನಿವಾಸಿ

Follow Us

newsics.com

ಬೆಂಗಳೂರು: ಸಾಮಾಜಿಕ ಜಾತಾಣಗಳಲ್ಲಿ ಜನರು ಪದೇ ಪದೇ ಒಂದಲ್ಲ ಒಂದು ರೀತಿಯಲ್ಲಿ ಮೋಸಕ್ಕೊಳಗಾಗುತ್ತಿದ್ದಾರೆ. ಅದ್ರಲ್ಲೂ ಫೇಸ್​ಬುಕ್​ ಫ್ರೆಂಡ್​, ಲವ್​ ಅಂತ ನಂಬಿಕೊಂಡು ಮತ್ತೆ ಮತ್ತೆ ವಂಚನೆಗೆ ಬಲಿಯಾಗುತ್ತಲೇ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಫೇಸ್ಬುಕ್ ಮಹಿಳೆ ಜತೆಗಿನ ಪರಿಚಯಕ್ಕೆ 35 ಲಕ್ಷ ಬೆಲೆ ತೆತ್ತಿದ್ದಾರೆ.

ಬೆಂಗಳೂರಿನ ನಿವಾಸಿಯಾಗಿರುವ 48 ವರ್ಷದ ವಿನ್ಸೆಂಟ್ ಎಂಬುವರು ಬಜಾಜ್​ ಫೈನಾನ್ಸ್​ ಯೂನಿಟ್​ನಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಫೇಸ್​ಬುಕ್​ನಲ್ಲಿ ತಮಗೆ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ 35 ಲಕ್ಷ ಪಡೆದು ವಂಚನೆ ಮಾಡಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ.

ಇಂಗ್ಲೆಂಡ್ ನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹದ ಹೆಸರಿನಲ್ಲಿ ಹತ್ತಿರವಾಗಿ ಒಟ್ಟಿಗೆ ಸೇರಿ ಬ್ಯುಸಿನೆಸ್ ಆರಂಭಿಸುವಂತೆ ನಂಬಿಸಿ ವಂಚಿಸಿದ್ದಾಳೆ.ನ್ಯಾನ್ಸಿ ಮಾತಿಗೆ ಮರುಳಾದ ವಿನ್ಸೆಂಟ್​ ಹಂತ ಹಂತವಾಗಿ 35 ಲಕ್ಷ ಕೊತ್ತಿದ್ದಾರೆ. ತದಂತರದಲ್ಲಿ ತನ್ನ ಫೇಸ್ ಬುಕ್ ಖಾತೆಯನ್ನೇ ಡಿಲೀಟ್ ಮಾಡಿ ನಾಪತ್ತೆಯಾಗಿದ್ದಾಳೆ.

ಈಗ ವಂಚಕಿಯ ವಿರುದ್ಧ ವಿನ್ಸೆಂಟ್ ಪೂರ್ವ ವಿಭಾಗದ ಸೆನ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಒಮಿಕ್ರಾನ್ ಆತಂಕ

ಮತ್ತಷ್ಟು ಸುದ್ದಿಗಳು

vertical

Latest News

ಭಾರೀ ಮಳೆಗೆ ಸಾರಡ್ಕದಲ್ಲಿ ಗುಡ್ಡ ಕುಸಿತ: ಕರ್ನಾಟಕ ಕೇರಳ ಸಂಚಾರ ಕ್ಕೆ ಅಡ್ಡಿ

newsics.com ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರೀ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಸಾರಡ್ಕದಲ್ಲಿ ಗುಡ್ಡ  ಕುಸಿತ ಸಂಭವಿಸಿದೆ. ರಸ್ತೆಗೆ ಮಣ್ಣಿನ ರಾಶಿ...

ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ವರ್ಗಾ

newsics.com ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ. ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇದೀಗ ಕಲಬುರ್ಗಿ ಜೈಲಿಗೆ  ವರ್ಗಾಯಿಸಲಾಗಿದೆ. ಶಿವಮೊಗ್ಗದ...

ಸಿಎಂ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಪ್ರಕರಣ: ಸಂಸದ ತೇಜಸ್ವಿ ಸೂರ್ಯ ವಿಚಾರಣೆ

newsics.com ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಸಂಸದ ತೇಜಸ್ವಿ...
- Advertisement -
error: Content is protected !!