Wednesday, November 30, 2022

‘ಕುಕ್ಕರ್ ಬಾಂಬ್’ – ತನಿಖೆ ಎನ್‌ಐಎಗೆ ಹಸ್ತಾಂತರ

Follow Us

newsics.com
ಮಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟ  ಪ್ರಕರಣವನ್ನು ಶೀಘ್ರದಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಅಧಿಕೃತಕವಾಗಿ ಹಸ್ತಾಂತರಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪುವೀಣ್ ಸೂದ್ ಅವರು ಹೇಳಿದ್ದಾರೆ.

ಈಗಾಗಲೇ ಪೊಲೀಸ್ ತನಿಖೆಯ ಜತೆ ಎನ್‌ಐಎ ಸೇರಿದಂತೆ ಕೇಂದ್ರ ತನಿಖಾ ತಂಡಗಳು ಸಹಕರಿಸುತ್ತಿವೆ. ಪ್ರಕರಣವನ್ನು ಇನ್ನೆರಡು ದಿನಗಳಲ್ಲಿ ಅಕೃತವಾಗಿ ಎನ್‌ಐಗೆ ಹಸ್ತಾಂತರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬುಧವಾರ ಮಂಗಳೂರಿಗೆ ಆಗಮಿಸಿದ ಸಚಿವರು ಸ್ಪೋಟ  ಸಂಭವಿಸಿದ ಸ್ಥಳ ಪರಿಶೀಲನೆ, ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಹಾಗೂ ಆರೋಪಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದುಷ್ಕರ್ಮಿ ಶಾರೀಕ್ ಹಿನ್ನೆಲೆಯ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತ ಯಾರ ಯಾರ ಜೊತೆ ಲಿಂಕ್ ಹೊಂದಿದ್ದ, ಬೆಂಬಲ ನೀಡಿದ ಸಂಘಟನೆಗಳು ಈ ಎಲ್ಲಾ ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಶಾರೀಕ್ ಸದ್ಯ ಗಂಭೀರ ಸ್ಥಿತಿಯಲ್ಲಿದ್ದು 8 ಮಂದಿ ವೈದ್ಯರ ನೇತೃತ್ವದಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾತನಾಡುವ ಸ್ಥಿತಿಗೆ ಬಂದ ಬಳಿಕ ಆತನಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುವುದು ಎಂದು ಸಚಿವರು ತಿಳಿಸಿದರು.

ಮೊಟ್ಟೆ ಉತ್ಪಾದನೆ – ಭಾರತಕ್ಕೆ 3ನೇ ಸ್ಥಾನ

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!