ಮಂಗಳೂರು: ಮಾರಣಾಂತಿಕ ಕೊರೋನಾ ವೈರಾಣು ಸೋಂಕಿನ ಪ್ರಕೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಜೋಡಿಯೊಂದು ತಮ್ಮ ವಿವಾಹವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರಿನಲ್ಲಿ ಫೆ. 10ರಂದು ನಡೆಯಬೇಕಿದ್ದ ವಿವಾಹಕ್ಕೆ ಆಗಮಿಸಬೇಕಿದ್ದ ವರ
ಗೌರವ್ ‘ವರ್ಲ್ಡ್ ಡ್ರೀಮ್’ ಎಂಬ ಹಡಗೊಂದರಲ್ಲಿ ಉದ್ಯೋಗದಲ್ಲಿದ್ದು, ತನ್ನ ಸಿಬ್ಬಂದಿಯೊಂದಿಗೆ ಹಾಂಗ್
ಕಾಂಗ್ ನಲ್ಲಿ ಸಿಲುಕಿದ್ದಾರೆ.
ಜ. 26ರಂದು ಚೀನಾದಿಂದ ಹೊರಟ ಹಡಗು ಫೆ. 5ರಂದು ಥೈವಾನ್ ತಲುಪಬೇಕಿತ್ತು. ಆದರೆ, ಥೈವಾನ್ ನಲ್ಲಿ
ಹಡಗು ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಇದರಿಂದ ಹಡಗನ್ನು ಮರಳಿ ಹಾಂಗ್ ಕಾಗ್ ಗೆ
ಕರೆದೊಯ್ಯಬೇಕಾಯಿತು. ಈಗ ಎಲ್ಲಾ ಸಿಬ್ಬಂದಿ, ಪ್ರಯಾಣಿಕರನ್ನು ಪ್ರತ್ಯೇಕವಾಗಿರಿಸಿ ತಪಾಸಣೆ
ನಡೆಸಲಾಗುತ್ತಿದೆ. ಆದರೆ, ಯಾರಲ್ಲೂ ಸೋಂಕು ಇರುವುದು ದೃಢಪಟ್ಟಿಲ್ಲ ಎಂದು ತಿಳಿದುಬಂದಿದೆ.