newsics.com
ಬೆಂಗಳೂರು: ಮಂಗಳೂರು ಸ್ಫೋಟದ ಶಂಕಿತ ಉಗ್ರ ಶಾರೀಕ್ ನನ್ನು ಸಂಘಟನೆಯೊಂದು ಸಮರ್ಥಿಸಿಕೊಂಡು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಸಂಘಟನೆ ಈ ರೀತಿಯ ಹೇಳಿಕೆ ಬಿಡುಗಡೆ ಮಾಡಿದೆ.
ಶಾರೀಕ್ ನಮ್ಮ ಸಹೋದರ ಎಂದು ಹೇಳಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ದಮನಿತ ನೀತಿಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ಘೋಷಣೆ ಇರಲ್ಲ. ಕೇವಲ ಕ್ರಿಯೆ ಎಂದು ಸಂಘಟನೆ ಹೇಳಿಕೊಂಡಿದೆ.
ಪ್ರಕರಣದ ತನಿಖೆಯ ಮೇಲ್ನೋಟ ವಹಿಸುತ್ತಿರುವ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಸಂಘಟನೆ ಬೆದರಿಕೆ ಒಡ್ಡಿದೆ ಎಂದು ವರದಿಯಾಗಿದೆ