newsics.com
ಮಂಗಳೂರು : ಕಳೆದ ಎರಡು ದಿನಗಳಿಂದ ಎಡಬಿಡದೇ ಸುರಿದ ಮಳೆಯಿಂದಾಗಿ ಮಂಗಳೂರಿನ ರಸ್ತೆಗಳು ನದಿಯಂತಾಗಿದ್ದು ವಾಹನಸವಾರರು ಪರದಾಡುವಂತಾಗಿದೆ.
ಅವೈಜ್ಞಾನಿಕ ಚರಂಡಿ ನಿರ್ಮಾಣ, ಹೊಂಡ ಬಿದ್ದ ರಸ್ತೆಗಳು, ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಮಳೆಗಾಲದ ಆರಂಭದ ದಿನಗಳಲ್ಲಿಯೇ ಮಂಗಳೂರಿನಲ್ಲಿ ಜನತೆ ಪರದಾಡುವಂತಾಗಿದೆ.
ಮಂಗಳೂರಿನಿಂದ ಮೂಡುಬಿದಿರೆಯವರೆಗಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಟ್ರಾಫಿಕ್ ಜಾಮ್ ಆಗಿದೆ. ಕುಡುಪುವಿನಿಂದ ಶಕ್ತಿನಗರದವರೆಗೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಪರಿಣಾಮ ಜನರು ಒಂದು ಗಂಟೆಗೂ ಅಧಿಕ ಕಾಲ ಈ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು ಜನ ಜೀವನ ದುಸ್ಥರವಾಗಿದೆ.