newsics.com
ಬೆಂಗಳೂರು: ಸಿನಿಮಾ ರಂಗದಲ್ಲಿ ಮಾರಿ ಮುತ್ತು ಪಾತ್ರ ಮೂಲಕ ಜನಪ್ರಿಯತೆ ಪಡೆದ ಪೋಷಕ ನಟಿ ಸರೋಜಾ ಅವರ ಮೊಮ್ಮಗಳು, ನಟಿ ಜಯಶ್ರೀ ಆರಾಧ್ಯ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಬಿಗ್ ಬಾಸ್ ಚೊಚ್ಚಲ ಓಟಿಟಿ (OTT) ಸೀಸನ್ನಲ್ಲಿ 12ನೇ ಸ್ಪರ್ಧಿಯಾಗಿ ಜಯಶ್ರೀ ಆರಾಧ್ಯ ಮನೆಯೊಳಗೆ ಕಾಲಿಟ್ಟಿದ್ದಾರೆ. ‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಮಾಡಿದ್ದರು.
ಮನೆ ಬಿಟ್ಟು ಬಂದವರಿಗೆ ಏನಾದರೂ ಮಾಡಬೇಕು ಎಂಬುದು ನನ್ನ ಆಸೆ. ಏರೋನಾಟಿಕ್ ಇಂಜಿನಿಯರ್ ಆಗಬೇಕು ಅಂದುಕೊಂಡಿದ್ದೆ. ಆವಾಗ ನಟನೆ ಮಾಡಬೇಕು ಎಂಬ ಆಸೆ ಮೂಡಿತು. ಆದರೆ, ನಾನು ಏನೇ ಮಾಡಿದ್ರೂ ಅಪ್ಪ ಅಮ್ಮ ಒಪ್ಪುತ್ತಿರಲಿಲ್ಲ. ಅಣ್ಣ ಹೇಳಿದ ಹಾಗೆ ಕೇಳಬೇಕಿತ್ತು. ಅದಕ್ಕಾಗಿ ಮನೆ ಬಿಟ್ಟೆ. ಕಾಸ್ಮೆಟಿಕ್ ರೀಟೆಲ್ ಮಾಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.