ಬೆಳಗಾವಿ: ಪದವಿ ಮುಗಿಸಿದ ವಿದ್ಯಾರ್ಥಿನಿಗೆ ಅಂಕಪಟ್ಟಿ ನೀಡದೇ ಸತಾಯಿಸಿದ ರಾಣಿಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ 1 ಲಕ್ಷ ರೂ ದಂಡ ವಿಧಿಸಿದೆ. ಅದನ್ನು ಪರಿಹಾರವಾಗಿ ಅರ್ಜಿದಾರರಾದ ಗೀತಾ ಈರಪ್ಪ ಇಜಾರ್ ದಾರ್ ಗೆ ನೀಡುವಂತೆ ಸೂಚಿಸಿದೆ. ಜೊತೆಗೆ, ಮಾನಸಿಕ ವೇದನೆಗಾಗಿ ಒಂದು ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.
ಬಾಗಲಕೋಟೆಯ ಕೌಲಪೇಟ್ ಗ್ರಾಮದ ಗೀತಾ ಬಿ.ಕಾಂ ಪದವಿ ಪಡೆಯಲು ವಿವಿಯ ಬಾಗಲಕೋಟೆಯ ಕಾಲೇಜಿನಿಂದ ೨೦೧೫ ರಲ್ಲಿ ಉತ್ತೀರ್ಣರಾಗಿದ್ದಳು. ಆದರೆ, ವಿದ್ಯಾಲಯ ಅಂಕಪಟ್ಟಿ ನೀಡಿರಲಿಲ್ಲ. ಇದರಿಂದ ಆಕೆ ಉನ್ನತ ಶಿಕ್ಷಣ ಇಲ್ಲವೇ ಉದ್ಯೋಗ ಪಡೆಯಲು ಅಸಮರ್ಥಳಾಗಿದ್ದಳು.
ಅಂಕಪಟ್ಟಿ ವಿವಾದ; ರಾಣಿ ಚೆನ್ನಮ್ಮ ವಿ.ವಿ.ಗೆ ಲಕ್ಷ ರೂ ದಂಡ
Follow Us