Tuesday, March 2, 2021

ಮನೆಗೆ ನುಗ್ಗಿ ‌ವಿವಾಹಿತೆಯ ಅಪಹರಣ!

NEWSICS.COM

ಉತ್ತರಕನ್ನಡ: ಮನೆಗೆ ನುಗ್ಗಿ ರುತಿಕಾ ಎಂಬ‌ ವಿವಾಹಿತ ಮಹಿಳೆಯನ್ನು ಅಪಹರಿಸಿರುವ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಬಸವೇಶ್ವರ ನಗರದಲ್ಲಿ ಘಟನೆ ನಡೆದಿದ್ದು, ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಜನ ಆಕೆಯನ್ನು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ.
ರುತಿಕಾ ಮಣಿಕಂಠ ಎನ್ನುವವರನ್ನು ಪ್ರೀತಿಸಿ ಮದುವೆಯಾದ ಕಾರಣ ಆಕೆಯ ತಾಯಿಯೇ ಅಪಹರಣ ಮಾಡಿಸಿದ್ದಾರೆನ್ನುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.

ಶಿರಸಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಆಕೆಯ ತಾಯಿ ರೂಪ ಶಿರ್ಸಿಕರ್ ಮಗಳ‌ ಮನೆಗೆ ಧಾವಿಸಿ ಪೆಪ್ಪರ್ ಸ್ಪ್ರೇಯನ್ನು ಮುಖಕ್ಕೆ ಎರಚಿ ಮಗಳನ್ನು ಆಕೆಯ ಗಂಡನ ಎದುರೇ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾಳೆ ಎಂದೂ ಹೇಳಲಾಗುತ್ತಿದೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದ ಬಳಿಕ ಸತ್ಯಾಂಶ ತಿಳಿಯಬೇಕಿದೆ.

ಯುಕೆಯಿಂದ ಬಂದ 151ಪ್ರಯಾಣಿಕರು ನಾಪತ್ತೆ: ಸೋಂಕು ಹರಡುವ ಆತಂಕ ಹೆಚ್ಚಳ

ಮತ್ತಷ್ಟು ಸುದ್ದಿಗಳು

Latest News

ರಾಜ್ಯಸಭೆ, ಲೋಕಸಭೆ ಟಿವಿ ಇನ್ನು ‘ಸಂಸದ್ ಟಿವಿ’

newsics.com ನವದೆಹಲಿ: ರಾಜ್ಯ ಸಭಾ ಮತ್ತು ಲೋಕ ಸಭಾ ಟಿವಿಯನ್ನು ವಿಲೀನ ಮಾಡಲಾಗಿದ್ದು, ಇನ್ನು 'ಸಂಸದ್ ಟಿವಿ' ಎಂದು ಕರೆಯಲಾಗುತ್ತದೆ. ರಾಜ್ಯ‌ ಸಭೆ ಹಾಗೂ ಲೋಕ ಸಭೆ ಕಲಾಪಗಳನ್ನು...

ಮೈಸೂರಿನ ಸುಧಾ ಹೆಗಡೆಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ

newsics.com ಮೈಸೂರು: ಮೈಸೂರಿನ ಸುಧಾ ಹೆಗಡೆ ಅವರಿಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಬ್ಯುಸಿನೆಸ್ ಬೈ ಬ್ರಾಹ್ಮಿನ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ 'ಗೆಲುವಿನೆಡೆಗೆ' ಎಂಬ ನಾಟಕದ ಅಭಿನಯಕ್ಕೆ ಈ ಪ್ರಶಸ್ತಿ ದೊರಕಿದೆ. ನಾಟಕವನ್ನು ಎಂ.ಸಿ ಕೃಷ್ಣಪ್ರಸಾದ್...

150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ: ಕಂಟೈನ್’ಮೆಂಟ್ ವಲಯವಾದ ಧರ್ಮಶಾಲೆ

newsics.com ಹಿಮಾಚಲ‌ಪ್ರದೇಶ: ಹಿಮಾಚಲ ಪ್ರದೇಶದ ಗ್ಯುಟೊ ತಾಂತ್ರಿಕ ಮೊನೆಸ್ಟ್ರಿಯ ಧರ್ಮಶಾಲೆಯ 150ಕ್ಕೂ ಹೆಚ್ಚು ಸನ್ಯಾಸಿಗಳಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಶಾಲೆಯನ್ನು ಕಂಟೈನ್'ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಒಬ್ಬ ಸನ್ಯಾಸಿಯನ್ನು...
- Advertisement -
error: Content is protected !!