Monday, November 29, 2021

ಹೆಣ್ಣು ಮಕ್ಕಳೆಂಬ ಕಾರಣಕ್ಕೆ ಕಿರುಕುಳ: ತಾಯಿ, ಇಬ್ಬರು ಮಕ್ಕಳ ಆತ್ಮಹತ್ಯೆ

Follow Us

Newsics.com

ಕಲಬುರಗಿ: ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ತಾಯಿಯೊಬ್ಬರು ತನ್ನ ಮೂವರು ಹೆಣ್ಣು  ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 4 ವರ್ಷದ ಇನ್ನೊಬ್ಬ ಮಗಳನ್ನು ರಕ್ಷಿಸಲಾಗಿದೆ. ಲಕ್ಷ್ಮಿ ಎಂಬುವವರು ತಮ್ಮ ಮಕ್ಕಳಾದ ಗೌರಮ್ಮ, ಸಾವಿತ್ರಿ ಮತ್ತು ಈಶ್ವರಿ ಜತೆ ಬಾವಿಗೆ ಹಾರಿದ್ದಾರೆ. ಲಕ್ಷ್ಮಿ, ಗೌರಮ್ಮ ಮತ್ತು ಸಾವಿತ್ರಿ ಮೃತಪಟ್ಟಿದ್ದಾರೆ. 4 ವರ್ಷದ ಈಶ್ವರಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮೂವರು ಹೆಣ್ಣು ಮಕ್ಕಳಿದ್ದ ಕಾರಣ ಪತಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ನಿಧನ

ಮತ್ತಷ್ಟು ಸುದ್ದಿಗಳು

Latest News

ಅಂತ್ಯಕ್ರಿಯೆ ನಡೆಸುವುದನ್ನೇ ಮರೆತ ಬಿಬಿಎಂಪಿ: 15 ತಿಂಗಳ ಬಳಿಕ ಪತ್ತೆಯಾಯ್ತು 2 ಕೋವಿಡ್ ಶವ!

newsics.com ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಇಬ್ಬರ ಶವಸಂಸ್ಕಾರ ಮಾಡುವುದನ್ನೇ ಮರೆತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, 15 ತಿಂಗಳ ಬಳಿಕ ಎರಡು ಶವಗಳನ್ನು ಹೊರಕ್ಕೆ ತಂದ...

ಕೃಷ್ಣನ ವಿಗ್ರಹ ಸ್ಥಾಪನೆ ಹೇಳಿಕೆ: ಮಥುರಾದಲ್ಲಿ ನಿಷೇಧಾಜ್ಞೆ

newsics.com ಮಥುರಾ(ಉತ್ತರ ಪ್ರದೇಶ): ಕೃಷ್ಣನ ಜನ್ಮಸ್ಥಾನ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ದೇವಾಲಯದ ಹತ್ತಿರವೇ ಮಸೀದಿ ಇದ್ದು,...

ತಿರುಮಲ ತಿರುಪತಿ ದೇವಸ್ಥಾನಮ್’ನ ಒಎಸ್’ಡಿ ಡಾಲರ್ ಶೇಷಾದ್ರಿ ನಿಧನ

newsics.com ವಿಶಾಖಪಟ್ಟಣಂ: ತಿರುಮಲ ತಿರುಪತಿ ದೇವಸ್ಥಾನಮ್ ನ ಪ್ರಧಾನ ಅರ್ಚಕ ಡಾಲರ್ ಶೇಷಾದ್ರಿ ನಿಧನರಾದರು. ಟಿಟಿಡಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶೇಷಾದ್ರಿ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು...
- Advertisement -
error: Content is protected !!