newsics.com
ಶಿವಮೊಗ್ಗ: ಚಲಿಸುತ್ತಿದ್ದ ರೈಲಿನ ಇಂಜಿನ್ ಕಳಚಿಹೋದ ಘಟನೆ ಇಲ್ಲಿನ ಬಿದರೆ ಬಳಿ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿ ನಲ್ಲಿ ಈ ಘಟನೆ ನಡೆದಿದ್ದು, ಕೆಲ ಕಾಲ ಭಯದ ವಾತಾವರಣ ಉಂಟಾಗಿತ್ತು.
ಶಿವಮೊಗ್ಗ ಸಮೀಪದ ಬಿದರೆ ಬಳಿ ಬರುತ್ತಿದ್ದಂತೆ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ. ಕಪ್ಲಿಂಗ್ ಸಡಿಲಗೊಂಡ ಕಾರಣ ಬೋಗಿಗಳು ಮತ್ತು ಇಂಜಿನ್ ಬೇರೆ ಬೇರೆಯಾಗಿದೆ. ಬೋಗಿಗಳ ಬಿಟ್ಟು ಇಂಜಿನ್ ಸ್ವಲ್ಪ ದೂರ ಚಲಿಸಿದೆ.