newsics.com
ಬೆಂಗಳೂರು: ವೈವಾಹಿಕ ಸಂಬಂಧ ಕುದುರಿಸುವ ಜಾಲ ತಾಣದಲ್ಲಿ ಹೆಸರು ನೋಂದಾಯಿಸಿದ ವ್ಯಕ್ತಿಯೊಬ್ಬ ಅಲ್ಲಿ ಪರಿಚಯವಾದ ಯುವತಿಗೆ ಬ್ಲ್ಯಾಕ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ರಾಜಾಜಿ ನಗರ ಸಮೀಪದ ಶಿವ ನಗರದ ನಿವಾಸಿ ವಿಜಯ ಕುಮಾರ್(40) ಎಂದು ಗುರುತಿಸಲಾಗಿದೆ. ವೈವಾಹಿಕ ಜಾಲ ತಾಣದಲ್ಲಿ ವಿಜಯ ಕುಮಾರ್ ಮದುವೆಗಾಗಿ ಹೆಸರು ನೋಂದಾಯಿಸಿದ್ದ. ಈ ಮೂಲಕ ಯುವತಿಯೊಬ್ಬಳ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸಲುಗೆ ಬೆಳೆದಿತ್ತು. ಖಾಸಗಿ ಕ್ಷಣಗಳನ್ನು ಕಳೆದಿದ್ದರು ಎನ್ನಲಾಗಿದೆ.
ಇದೇ ಚಿತ್ರಗಳನ್ನು ಮುಂದಿಟ್ಟುಕೊಟ್ಟು ಆರೋಪಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದಾನೆ. ಸಾಮಾಜಿಕ ಜಾಲ ತಾಣ ಇನ್ ಸ್ಟಾ ಗ್ರಾಮ್ ನಲ್ಲಿ ನಕಲಿ ಖಾತೆ ಕೂಡ ತೆರೆದಿದ್ದ. ಯುವತಿಯಿಂದ 50,000 ರೂಪಾಯಿ ಪಡೆದುಕೊಂಡಿದ್ದ ಆರೋಪಿ ಇನ್ನಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದ. ಅಂತಿಮವಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಳಿ ಇಧ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.