newsics.com
ಬೆಂಗಳೂರು: ಪ್ರತಿಷ್ಟಿತ ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕ ವಾಯುನೆಲೆಯ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಮಾಂಸ ಆಹಾರದ ಹೋಟೆಲ್ ಗಳನ್ನು ಕೂಡ ಮುಚ್ಚುವಂತೆ ಸೂಚನೆ ನೀಡಲಾಗಿದೆ.
ಜನವರಿ 30ರಿಂದ ಫೆಬ್ರವರಿ 20ರ ತನಕ ಈ ಆದೇಶ ಜಾರಿಯಲ್ಲಿ ಇರಲಿದೆ. ಏರ್ ಶೋದಲ್ಲಿ ಹಲವು ವಿಮಾನಗಳು ಹಾರಾಟ ನಡೆಸಲಿವೆ. ಈ ವೇಳೆ ಮಾಂಸ ತಿನ್ನುವ ಸಲುವಾಗಿ ಹಕ್ಕಿಗಳು ಹಾರಿ ಬಂದರೆ ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ
ಮಂಗಳೂರು ಸ್ಫೋಟ ಪ್ರಕರಣ:ಶಂಕಿತ ಆರೋಪಿ ಶಾರೀಕ್ ಶೀಘ್ರ ಎನ್ ಐ ಎ ವಶಕ್ಕೆ