NEWSICS.COM
ಚಿತ್ರದುರ್ಗ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವ್ಯಾಪ್ತಿಯ ವೈದ್ಯಕೀಯ,ನರ್ಸಿಂಗ್ ಅರೆ ವೈದ್ಯಕೀಯ ಕಾಲೇಜುಗಳು ಡಿ.1ರಿಂದ ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಪದವಿ ಕಾಲೇಜುಗಳು ನ.17ರಿಂದ ಆರಂಭಗೊಳ್ಳಲಿದೆ. ವೈದ್ಯಕೀಯ ವಿದ್ಯಾರ್ಥಿಗಳು ಹೊರ ರಾಜ್ಯಗಳಿಂದಲೂ ಬರಲಿದ್ದಾರೆ ಆದ್ದರಿಂದ ಕಾಲಾವಕಾಶ ಬೇಕು ಈ ಕಾರಣಕ್ಕೆ ಡಿ1ರಿಂದ ಆರಂಭಿಸಲು ತೀರ್ಮಾನಿಸಲಾಗಿದೆ. ಶಾಲೆ ಆರಂಭದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಪದವಿ ಕಾಲೇಜುಗಳು ಆರಂಭದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಂದು (ನ13) ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ್ದಾರೆ.