ಬೆಂಗಳೂರು: ಅರಣ್ಯ ಸಚಿವ ಆನಂದ್ ಸಿಂಗ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇತ್ತೀಚೆಗೆ ಆನಂದ್ ಸಿಂಗ್ ಅವರು ಕೊರೋನಾ ರೋಗಿಗಳು ಇದ್ದ ವಾರ್ಡ್ ಗೆ ಭೇಟಿ ನೀಡಿದ್ದರು. ಅವರ ಕಾರು ಚಾಲಕನಿಗೂ ಕೂಡ ಕೊರೋನಾ ಸೋಂಕು ದೃಢೀಕರಿಸಲಾಗಿತ್ತು.
ಈ ಮೊದಲು ಸಚಿವ ಸಿ ಟಿ ರವಿ ಅವರಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಸಿ ಟಿ ರವಿ ಅವರು ಇದೀಗ ಕೊರೋನಾದಿಂದ ಗುಣಮುಖರಾಗಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಜಾರಿಯಲ್ಲಿದ್ದರೂ ಅದು ಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಜನರು ಯಾವುದೇ ನಿಯಂತ್ರಣಗಳಿಲ್ಲದೆ ಓಡಾಟ ನಡೆಸುತ್ತಿದ್ದಾರೆ