ಬೆಂಗಳೂರು: ಸಚಿವ ಆನಂದ್ ಸಿಂಗ್ ಅವರ ಖಾತೆ ಮತ್ತೆ ಬದಲಾಗುವ ಸಾಧ್ಯತೆಯಿದೆ. ಖಾತೆ ಬದಲಾವಣೆಗಾಗಿ ಮತ್ತೆ ಸಿಎಂ ಯಡಿಯೂರಪ್ಪ ಅವರಿಗೆ ಆನಂದ್ ಸಿಂಗ್ ದುಂಬಾಲು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಅರಣ್ಯ ಇಲಾಖೆ ಈ ಮೊದಲೇ ದೂರು ದಾಖಲಿಸಿದ್ದರೂ ಆನಂದ್ ಸಿಂಗ್ ಗೆ ಅರಣ್ಯ ಖಾತೆ ಜವಾಬ್ದಾರಿ ನೀಡಿರುವುದು ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಹೈಕಮಾಂಡ್ ಸಹ ಗರಂ ಆಗಿದೆ ಎನ್ನಲಾಗಿದೆ.
ಹೀಗಾಗಿ ಆನಂದ್ ಸಿಂಗ್ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಖಾತೆ ಬದಲಾವಣೆ ಮಾಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಈ ಮೊದಲು ಆನಂದ್ ಸಿಂಗ್ ಅವರಿಗೆ ಆಹಾರ ಖಾತೆ ನೀಡಲಾಗಿತ್ತು.
ಸಚಿವ ಆನಂದ್ ಸಿಂಗ್ ಖಾತೆ ಮತ್ತೆ ಬದಲಾವಣೆ ಸಾಧ್ಯತೆ
Follow Us