NEWSICS.COM
ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಯುಕೆಯಿಂದ ಬಂದ 1,638 ಮಂದಿಯಲ್ಲಿ 14ಮಂದಿಗೆ ಸೋಂಕು ದೃಢಪಟ್ಟಿದೆ. ಇದರ ಬೆನ್ನಲ್ಲೆ 2ನೇ ಲಿಸ್ಟ್ ನಲ್ಲಿದ್ದ 151 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇದರಿಂದ ರಾಜ್ಯದಲ್ಲಿ ಸೋಂಕು ಹರಡುವ ಆತಂಕ ಹೆಚ್ಚಿದೆ. ಕೊಟ್ಟ ವಿಳಾಸಕ್ಕೆ ಭೇಟಿ ನೀಡಿದರೂ ಮನೆಗೆ ಬೀಗಹಾಕಲಾದೆ ಎನ್ನುತ್ತಿದ್ದಾರೆ ಅಧಿಕಾರಿಗಳು. ಯುಕೆಯಿಂದ ಬಂದ 151ಮಂದಿಯ ಸುಳಿವಿಗೆ ಬಿಬಿಎಂಪಿ ಕಷ್ಟಪಡುವಂತಾಗಿದೆ. ಇವರ ಪತ್ತೆಗಾಗಿ ಬಿಬಿಎಂಪಿ ಈಗ ಫೋನ್ ನಂಬರ್ ಟ್ರೇಸ್ ಮಾಡಲು ಮುಂದಾಗಿದೆ ಎಂದು ಬಿಬಿಎಂಪಿ ಸಿಹೆಚ್’ಓ ವಿಜಯೇಂದ್ರ ಹೇಳಿದ್ದಾರೆ.