Wednesday, July 6, 2022

ಟ್ವಿಟರ್’ನಲ್ಲಿ‌ ಕನ್ನಡಿಗನನ್ನು ಫಾಲೋ‌ ಮಾಡ್ತಿದ್ದಾರೆ ಮೋದಿ!

Follow Us

ತುಮಕೂರು: ಸೋಷಿಯಲ್ ಮೀಡಿಯಾ ದಲ್ಲಿ ಹೊಸ ಹವಾ ಸೃಷ್ಟಿಸಿರುವ ಪ್ರಧಾನಿ ನರೇಂದ್ರ‌ ಮೋದಿ, ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಜಗತ್ತಿನ ಹಲವು ಮಹಾನ್ ನಾಯಕರಿಗೆ ಸಮಾನವಾಗಿ ಕೋಟ್ಯಂತರ ಫಾಲೋವರ್’ಗಳನ್ನು ಹೊಂದಿದ ಪ್ರಧಾನಿ ಒಬ್ಬ ಕನ್ನಡಿಗನನ್ನು ಫಾಲೋ‌ ಮಾಡ್ತಾರೆ. ಇದು ನಿಜಕ್ಕೂ‌ ಕನ್ನಡಿಗರ ಹೆಮ್ಮೆ.
ಇಷ್ಟಕ್ಕೂ ಜಾಗತಿಕ ನಾಯಕರೆನಿಸಿದ ಪ್ರಧಾನಿ ಮೋದಿ ಫಾಲೋ ಮಾಡ್ತಿರೋ ಈ ಕನ್ನಡಿಗ ಕನ್ನಡದ ನವರಸ ನಾಯಕ, ಬಿಜೆಪಿ ಧುರೀಣ ನಟ ಜಗ್ಗೇಶ್.
ಹೌದು, ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ಜಡೆಮಾಯಸಂದ್ರದ ಜಗ್ಗೇಶ್ ಅವರನ್ನು ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯ ಮೂಲಕ ಅನುಸರಿಸುತ್ತಿದ್ದಾರಂತೆ. ಈ ವಿಚಾರವನ್ನು ಸ್ವತಃ ಜಗ್ಗೇಶ್ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ.
ಪೋಸ್ಟ್ ಹಾಕಿರುವ ಜಗ್ಗೇಶ್, 6 ಕೋಟಿ ಹಿಂಬಾಲಕರನ್ನು ಹೊಂದಿರುವ ಮೋದಿ ತಮ್ಮ ಅಕೌಂಟ್ ಮೂಲಕ 2,354 ಜನರನ್ನು‌ ಮಾತ್ರ ಫಾಲೋ ಮಾಡ್ತಾರೆ. ಆ 2354 ಜನರಲ್ಲಿ ನಾನೂ ‌ಒಬ್ಬ ಅನ್ನೋದು ನನ್ನ‌ ಪಾಲಿಗೆ ಆಸ್ಕರ್ ಪ್ರಶಸ್ತಿ ಇದ್ದಂತೆ‌ ಎಂದಿದ್ದಾರೆ.
ಇತ್ತೀಚೆಗಷ್ಟೇ ಮೋದಿ‌ ಸೋಷಿಯಲ್ ‌ಮೀಡಿಯಾ ಜನಪ್ರಿಯತೆ ಚರ್ಚೆಗೆ ಬಂದಿತ್ತು. ಇದೀಗ ಮೋದಿ‌ ಜಗ್ಗೇಶ್ ಫಾಲೋ ಮಾಡುತ್ತಿರುವ ಸಂಗತಿಯನ್ನು ಜಗ್ಗೇಶ್ ಸಂಭ್ರಮದಿಂದ ಹಂಚಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ:  ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ  ನಗರದ ನವಲೂರಿನಲ್ಲಿ ಈ  ಘಟನೆ ನಡೆದಿದೆ. ಸಾಫ್ಟವೇರ್...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...
- Advertisement -
error: Content is protected !!