ಬೆಂಗಳೂರು: ದೇಶದ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಜಿಯೋ ಕರ್ನಾಟಕದಲ್ಲಿ ಇದುವರೆಗೂ 2 ಕೋಟಿಗೂ ಅಧಿಕ ಗ್ರಾಹಕರನ್ನು ಪಡೆದುಕೊಂಡಿದ್ದು, ಟೆಲಿಕಾಂ ಉದ್ಯಮವೂ ಕುಸಿತ ಕಾಣುತ್ತಿರುವ ಸಂದರ್ಭದಲ್ಲೂ ಜಿಯೋದ ಈ ಬೆಳವಣಿಗೆ ಖುಷಿ ತಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಜಿಯೋ ಡಿಜಿಟಲ್ ಲೈಫ್ ಕರ್ನಾಟಕದಲ್ಲಿ ಉತ್ತಮ ಗ್ರಾಹಕರನ್ನು ಗಳಿಸಿಕೊಂಡಿದ್ದು, ನಮ್ಮನ್ನು ನಂಬಿ ವಿಶ್ವಾಸ ಇಟ್ಟು ಚಂದಾದಾರರಾದವರಿಗೆ ಜಿಯೋ ಧನ್ಯವಾದ ಅರ್ಪಿಸಿದೆ.
4 ಜಿ ಸೇವೆಯೊಂದಿಗೆ ಭಾರತಿಯರನ್ನು ಸಶಕ್ತರನ್ನಾಗಿಸುವ ಉದ್ದೇಶದಿಂದ ಜಿಯೋ ತನ್ನ ಗ್ರಾಹಕರಿಗೆ ಎಲ್ಲ ಟ್ಯಾರಿಫ್ ಪ್ಲ್ಯಾನ್ ಗಳಲ್ಲೂ ಮಾರುಕಟ್ಡೆ ದರದ ಹೋಲಿಕೆಯಲ್ಲಿ ಶೇಕಡಾ 25 ರಷ್ಟು ಹೆಚ್ಚಿನ ಮೌಲ್ಯ ನೀಡುತ್ತದೆ ಎಂದು ಜಿಯೋ ಕಂಪನಿ ವಿವರಣೆ ನೀಡಿದೆ.
ಜಿಯೋ ಫೈಬರ್ ಯೋಜನೆಯಡಿ ಕರ್ನಾಟಕದಾದ್ಯಂತ ವಿವಿಧ ನಗರಗಳಲ್ಲಿ 20 ಲಕ್ಷಕ್ಕೂ ಅಧಿಕ ಮನೆಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಿದ್ದು, ಜಿಯೋ ಗ್ರಾಹಕರಿಗೆ 1 ಗಿಗಾಬೈಟ್ವರೆಗಿನ ವೇಗ ಮತ್ತು 4ಕೆ ಎಚ್ಡಿ ಸೆಟ್ ಅಪ್ ಬಾಕ್ಸ್ ಮೂಲಕ ಅಮೇಜಾನ್ ಪ್ರೈಂ ಡಿಸ್ನಿ ಹಾಟ್ ಸ್ಟಾರ್, ವೂಟ್ ಸೇರಿದಂತೆ ಹಲವು ಲಾಭಗಳನ್ನು ನೀಡುವ ಭರವಸೆ ನೀಡಿದೆ.
ರಾಜ್ಯದಲ್ಲಿ 2 ಕೋಟಿಗೂ ಅಧಿಕ ಜಿಯೋ ಗ್ರಾಹಕರು
Follow Us