ಬೆಂಗಳೂರು: ನಗರದ ಬೊಮ್ಮಸಂದ್ರದಲ್ಲಿರುವ ಸಿದ್ಧ ಆಹಾರ ಮಸಾಲಾ ಪದಾರ್ಥಗಳ ತಯಾರಿಕಾ ಕಂಪನಿ ಎಂಟಿಆರ್ ಮುಖ್ಯ ಘಟಕದ 30 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ.
ನಾಳೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಲಾಕ್ ಡೌನ್
ಈ ಹಿನ್ನೆಲೆಯಲ್ಲಿ ಇಡೀ ಘಟಕವನ್ನು ಸೀಲ್ಡೌನ್ ಮಾಡಲಾಗಿದೆ. 40 ಉದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ವಾರದ ಹಿಂದೆ ಕಂಪನಿಯ ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಅವರಿಂದಾಗಿಯೇ ಇದೀಗ ಇಲ್ಲಿ ಕೆಲಸ ಮಾಡುವ ಸುಮಾರು 30 ಜನರಿಗೆ ವೈರಸ್ ತಗುಲಿದೆ.
ಮಾರಕ ಕೊರೋನಾಕ್ಕೆ ಮತ್ತೊಬ್ಬಎಎಸ್ಐ ಬಲಿ
ಇಲ್ಲಿ ತಯಾರಾಗುವ ಪದಾರ್ಥಗಳು ದೇಶ-ವಿದೇಶಗಳಿಗೂ ರಫ್ತಾಗುತ್ತಿವೆ. ಸೀಲ್ಡೌನ್ನಿಂದಾಗಿ ಉತ್ಪಾದನಾ ಕಾರ್ಯ ಸ್ಥಗಿತವಾಗಿದೆ.