newsics.com
ಮಂಡ್ಯ: ಜಿಲ್ಲೆಯ ಗುತ್ತಲಿನ ಅರಕೇಶ್ವರಸ್ವಾಮಿ ದೇಗುಲದ ಮೂವರು ಅರ್ಚಕರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಸೋಮವಾರ ಮುಂಜಾನೆ ಬಂಧಿಸಿದ್ದಾರೆ.
ಮದ್ದೂರು ತಾಲ್ಲೂಕು ಸಾದೊಳಲು ಗೇಟ್‌ನ ಬಸ್ ತಂಗುದಾಣದಲ್ಲಿ ಮೂವರು ಆರೋಪಿಗಳು ಮಲಗಿದ್ದರು. ಸೋಮವಾರ ನಸುಕಿನಲ್ಲಿ ಆರೋಪಿಗಳನ್ನು ಸುತ್ತುವರಿದ ಪೊಲೀಸರು ಶರಣಾಗಲು ಸೂಚನೆ ನೀಡಿದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧಿತರನ್ನು ಆಂಧ್ರಮೂಲದ ವಿಜಿ, ಮದ್ದೂರಿನ ಗಾಂಧಿ ಮತ್ತು ಮಂಜು ಎಂದು ಗುರುತಿಸಲಾಗಿದೆ. ಅರಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಲಗಿದ್ದ ಮೂವರು ಅರ್ಚಕರನ್ನು ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದರು.
ಪಿಎಸ್ಐ ಶರತ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದಾರೆ. ಕೊಲೆ ಆರೋಪಿಗಳು ನಡೆಸಿದ ಹಲ್ಲೆಯಿಂದ ಓರ್ವ ಸಬ್ ಇನ್‌ಸ್ಪೆಕ್ಟರ್, ಇಬ್ಬರು ಕಾನ್‌ಸ್ಟೆಬಲ್’ಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳು ತೊಪ್ಪನಹಳ್ಳಿ, ಸಾದೊಳಲು, ಹುಲಿಗೆರೆಪುರದ ನಿರ್ಜನ ಪ್ರದೇಶದಲ್ಲಿ ಶೆಡ್ ಹಾಕಿಕೊಂಡು ರಾತ್ರಿ ಕಳೆಯುತ್ತಿದ್ದರು.
ಆರೋಪಿಗಳ ಸೆರೆ ಕಾರ್ಯಾಚರಣೆ ವೇಳೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಲಾಯಿತು. ಆದರೆ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾದಾಗ, ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.
ಮೂರು ಲಕ್ಷ ಗಾಂಜಾ ಗಿಡಗಳ ನಾಶ
ದೇಶದೆಲ್ಲೆಡೆ ಕಂಗನಾ ಹವಾ; ಝಾನ್ಸಿ ರಾಣಿ ಸಪೋರ್ಟ್’ಗೆ ಬಂತು ಸೀರೆ…!
ದೆಹಲಿ ಸಿಎಎ ಗಲಭೆ; ಉಮರ್ ಖಾಲಿದ್ ಬಂಧನ
ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು