newsics.com
ಬೆಂಗಳೂರು: ಯುವತಿ ವಿಚಾರಕ್ಕೆ ಶುರುವಾದ ಜಗಳ ಒಬ್ಬನ ಹತ್ಯೆಯಲ್ಲಿ ಕೊನೆಯಾದ ಘಟನೆ ಬೆಂಗಳೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ನಡೆದಿದೆ. ಲಿಖಿತ್ (21) ಎಂಬಾತನನ್ನು ನಯೀದ್ ಎಂಬಾತ ಹಾಡಹಗಲೇ ಕೊಲೆ ಮಾಡಿದ್ದಾನೆ.
ಯುವತಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಉಂಟಾಗಿ, ಕೊನೆಗೆ ಡ್ಯಾಗರ್ನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಯುವತಿ ವಿಚಾರಕ್ಕೆ ಮಾತಾಡಲು ನಯೀದ್ ನನ್ನ ಲಿಖಿತ್ ಕರೆಸಿಕೊಂಡಿದ್ದ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.
ಲಿಖಿತ್ ನಯೀದ್ ಗೆ ಡ್ಯಾಗರ್ನಿಂದ ಹಲ್ಲೆಗೆ ಮುಂದಾಗಿದ್ದು, ಆಗ ನಯೀದ್ ಡ್ಯಾಗರ್ ಕಸಿದುಕೊಂಡು ಲಿಖಿತ್ ಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಲಿಖಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಕರಣ ದಾಖಲಾಗಿದೆ.