Thursday, December 8, 2022

ಅದ್ಧೂರಿಯಾಗಿ ನೆರವೇರಿದ ದಸರಾ ಜಂಬೂ ಸವಾರಿ-ಚಾಮುಂಡೇಶ್ವರಿಗೆ ಭಕ್ತಿ, ಶ್ರದ್ಧೆಯಿಂದ ನಮನ ಸಲ್ಲಿಸಿದ ಭಕ್ತಸಾಗರ!

Follow Us

ಮೈಸೂರು:  ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿ ಅದ್ಧೂರಿಯಾಗಿ ನೆರವೇರಿತು.

ಚಿನ್ನದ ಅಂಬಾರಿಯನ್ನು ಹೊತ್ತು ಆನೆ ಅಭಿಮನ್ಯು ರಾಜಗಾಂಭೀರ್ಯದೊಂದಿಗೆ ಸಾಗಿದರೆ, ಗಜಪಡೆ, ಕಲಾತಂಡಗಳು ಸಾಥ್​ ನೀಡಿದವು. ಗಜಪಡೆಯ ಹಿರಿಯ ನಾಯಕ ಅರ್ಜುನ್ ನಿಶಾನೆ ಆನೆಯಾಗಿ ಮಾರ್ಗ ತೋರಿಸುತ್ತಾ ಸಾಗಿದ. ಆತನ ಹಿಂದೆ ಭೀಮ, ಗೋಪಿ, ಧನಂಜಯ, ಮಹೇಂದ್ರ, ಗೋಪಾಲಸ್ವಾಮಿ ಆನೆಗಳು ನೌಪತ್ ಆನೆಗಳಾಗಿ ಸಾಗಿದವು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಆನೆ ಅಭಿಮನ್ಯು ಹೊತ್ತು ರಾಜಗಾಂಭೀರ್ಯದೊಂದಿಗೆ ನಡೆಯುವ ಮೂಲಕ ಜಂಬೂಸವಾರಿ ನೆರವೇರಿತು.

ಮೆರವಣಿಗೆಯಲ್ಲಿ 53 ಜಾನಪದ ಕಲೆಗಳ ನೂರಾರು ಮಂದಿ ಕಲಾವಿದರು, ತಮ್ಮ ಕಲೆಗಳ ಪ್ರದರ್ಶನವನ್ನು ನೀಡುತ್ತಾ ಸಾಗಿದರು. ಕಲಾ ವೈಭವ ಮಾರ್ಗದ ಉದ್ದಕ್ಕೂ ಮೇಳಸಿತ್ತು. ಜಾನಪದ ಕಲೆಗಳ ಕಲರವ ಎಲ್ಲರ ಕಣ್ಮನ ಸೆಳೆಯಿತು. ಅದರ ನಡುವೆ 31 ಜಿಲ್ಲೆಗಳು ಸ್ತಬ್ಧ ಚಿತ್ರಗಳು, ಅಲ್ಲಿನ ಐತಿಹಾಸಿಕ ಸ್ಥಳಗಳು, ಸಂಸ್ಕೃತಿ, ಪರಂಪರೆಯನ್ನು ಹೊತ್ತು ಸಾಗಿದವು. ವಿವಿಧ ಇಲಾಖೆಗಳ 16 ಸ್ತಬ್ಧ ಚಿತ್ರಗಳು ತಮ್ಮ ಕಾರ್ಯಕ್ರಮ, ಯೋಜನೆಗಳ ಕುರಿತ ಮಾಹಿತಿಯನ್ನು ಹೊತ್ತು ಸಾಗಿ ಎಲ್ಲರ ಮನ ಸೋರೆಗೊಂಡವು.

ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಅಭಿಮನ್ಯು ಆನೆ ರಾಜ ಗಾಭೀರ್ಯದಿಂದ ವೇದಿಕೆ ಮುಂಭಾಗಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವ ಸುನೀಲ್ ಕುಮಾರ್, ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಗೌತಮ್ ಬಗಾದಿ, ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.

 

 

 

ಮತ್ತಷ್ಟು ಸುದ್ದಿಗಳು

vertical

Latest News

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...

ಗುಜರಾತ್ ಚುನಾವಣಾ ಫಲಿತಾಂಶ: ರಾಜ್ಯ ರಾಜಕೀಯದಲ್ಲಿ ಸಂಚಲನ

newsics.com ನವದೆಹಲಿ: ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯ  ರಿಸಲ್ಟ್ ಇದೀಗ ಹೊರಬಂದಿದೆ. ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದುವರೆಗಿನ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ. 157 ಕ್ಷೇತ್ರಗಳನ್ನು ಗೆಲ್ಲುವ ಹಂತದಲ್ಲಿದೆ.  ಸೋಮವಾರ ನೂತನ ಮುಖ್ಯಮಂತ್ರಿ...
- Advertisement -
error: Content is protected !!