newsics.com
ಮೈಸೂರು: ತಿಂಗಳ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಶರತ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕಗೊಂಡಿದ್ದಾರೆ. 2009ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
ವಿಶ್ವವಿಖ್ಯಾತ ದಸರಾಗೆ ಅರಮನೆ ನಗರಿ ಸಜ್ಜಾಗುತ್ತಿರುವ ವೇಳೆ ಜಿಲ್ಲಾಧಿಕಾರಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಶರತ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದು ಮೂರನೇ ಬಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೊಂಡಿದ್ದಾರೆ. ಈ ಹಿಂದೆ ಅವರು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರಲ್ಲದೆ ಬೃಹತ್ ಬೆಂಗಳೂರು ವಿಶೇಷ ಆಯುಕ್ತ(ಆರೋಗ್ಯ ಮತ್ತು ಐಟಿ) ಪಿ ರಾಜೇಂದ್ರ ಚೋಳನ್, ಬೃಹತ್ ಬೆಂಗಳೂರು ವಿಶೇಷ ಆಯುಕ್ತ (ಎಸ್ಟೇಟ್) ಜೆ ಮಂಜುನಾಥ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ಗೆ ನಿರ್ವಹಣಾ ನಿರ್ದೇಶಕರಾಗಿ ಹೆಫೊಸಿಬ್ ರಾಣಿ ಕೊರ್ಳಪತಿ ಅವರ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸಿಲ್ಕ್ ಮಾರ್ಕೇಟಿಂಗ್ ಬೋರ್ಡ್ಗೆ ನಿರ್ವಹಣಾ ನಿರ್ದೇಶಕರಾಗಿ ಎಂಆರ್ ರವಿ ಹಾಗೂ ಪಂಚಾಯತ್ ರಾಜ್ ನಿರ್ದೇಶಕರಾಗಿ ಪಿ. ಶಿವಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸದ್ಯದಲ್ಲೇ ರೈಲಿನ ಎಸಿ, ಸ್ಲೀಪರ್ ಪ್ರಯಾಣ ದುಬಾರಿ ಸಾಧ್ಯತೆ
ನಟ ಸುಶಾಂತ್ ಸಾವಿನ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬಂದಿಲ್ಲ- ಸಿಬಿಐ
ಸಂಸದ ಡಾ.ಜಾಧವ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಜಾಮೀನು ಅರ್ಜಿ ವಜಾ; ರಾಗಿಣಿ, ಸಂಜನಾ ಸೇರಿ ಎಲ್ಲರಿಗೂ ಜೈಲೇ ಗತಿ