newsics.com
ಮೈಸೂರು: ಫುಟ್‌ಬಾಲ್ ಆಟಗಾರ ಯಶವಂತ ಕುಮಾರ್(23) ದೂರದ ಇಟಲಿಯ ರೋಮ್‌ನಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ಯಶವಂತ್ ಕುಮಾರ್ ಮೈಸೂರಿನ ಎನ್.ಆರ್. ಮೊಹಲ್ಲಾದ ಎನ್.ಕುಮಾರ್ ಹಾಗೂ ರೂಪಾ ದಂಪತಿಯ ಪುತ್ರ . ವಿದ್ಯಾವರ್ಧಕ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಸೀರೀ ಬಿ ಫುಟ್‌ಬಾಲ್ ಲೀಗ್ನಲ್ಲಿ ಭಾಗವಹಿಸಲು 4 ತಿಂಗಳ ಹಿಂದೆ ಕ್ಯಾಲ್ಸಿಯೊ ಸಿ 5 ತಂಡಗಳೊಂದಿಗೆ ಯಶವಂತ ಕುಮಾರ್ ರೋಮ್ಗೆ ತೆರಳಿದ್ದರು.
ಆ.6 ರಂದು ಯಶವಂತ ಕುಮಾರ್ ಅವರು ರೋಮ್ನ ಜಲಪಾತವೊಂದರಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ರೋಮ್ನ ಸ್ಥಳೀಯ ಮಾಧ್ಯಮ ವರದಿ ಮಾಡಿತ್ತು. ಜಲಪಾತದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದೀಗ ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.