ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳಿಗೆ ಸದ್ಯ ಮರಳದಂತೆ ಮೈಸೂರು ವಿವಿ ಸೂಚಿಸಿದೆ.
ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮೈಸೂರು ವಿವಿ ಈ ಕ್ರಮ ಕೈಗೊಂಡಿದೆ.
ಮೈಸೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಬಿ ಟೆಕ್, ಎಂ.ಎಸ್. ಪ್ರೋಗ್ರಾಮಿಂಗ್ನ ಇನ್ಫಾರ್ಮೇಷನ್ ಟೆಕ್ನಾಲಜಿ, ಸಾಫ್ಟ್ವೇರ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಚೀನಾ ದೇಶದ ಒಟ್ಟು 120 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಈ ಪೈಕಿ 18 ವಿದ್ಯಾರ್ಥಿಗಳು ಹೊಸ ವರ್ಷಾಚರಣೆಗೆಂದು ಜ.15ರಂದು ಚೀನಾಗೆ ತೆರಳಿದ್ದು, ಅವರನ್ನು ಸದ್ಯಕ್ಕೆ ಅಲ್ಲಿಂದ ಹಿಂದಿರುಗದಂತೆ ಸೂಚಿಸಲಾಗಿದೆ. ಈ 18 ವಿದ್ಯಾರ್ಥಿಗಳು ಜ.25ಕ್ಕೆ ಹಿಂದಿರುಗಬೇಕಿತ್ತು.
ಚೀನಾದ ಝೂಮೇಡಿಯನ್ ( zhumadian) ಪ್ರಾಂತ್ಯದ ಹೊಂಗೈ ( Huanghai) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ‘ವಿದ್ಯಾರ್ಥಿ ವಿನಿಮಯ’ ಯೋಜನೆಯಲ್ಲಿ ಮೈಸೂರು ವಿವಿಗೆ ಬಂದಿದ್ದರು.
ಮರಳಿ ಬರದಂತೆ ಚೀನಾ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಸೂಚನೆ
Follow Us