ಧಾರವಾಡ: ಹಿರಿಯ ಸಾಹಿತಿ, ನಿವೃತ್ತ ಐಆರ್ ಎಸ್ ಅಧಿಕಾರಿ ಎನ್.ಪಿ. ಭಟ್ (88) ಭಾನುವಾರ ಇಲ್ಲಿನ ನಾರಾಯಣಪುರದಲ್ಲಿರುವ ನಿವಾಸದಲ್ಲಿ ನಿಧನರಾದರು. ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ಭಟ್ ಅವರಿಗೆ ಪತ್ನಿ ಡಾ.ಯಶೋಧಾ (ಡಾ.ವಿ.ಕೃ.ಗೋಕಾಕ್ ಅವರ ಮಗಳು), ಸೊಸೆ ಸುಮಂಗಲಾ ಭಟ್ ಇದ್ದಾರೆ.
ಅತಿ ಕ್ರಿಯಾಶೀಲರಾಗಿದ್ದ ಭಟ್ ಅವರು ‘ಅವನಿ ರಸಿಕರ ರಂಗ’ ಎಂಬ ಸಂಸ್ಥೆ ಸ್ಥಾಪಿಸಿ ದಶಕಕ್ಕೂ ಅಧಿಕ ಕಾಲ ಸಾಹಿತ್ಯ, ಸಾಂಸ್ಕೃತಿಕ, ಸಂಗೀತ ಸಮೃದ್ಧಗೊಳಿಸಲು ಶ್ರಮಿಸಿದ್ದರು. ರಂಜನ ಭಟ್ಟ, ನಾರಂಗಿ ಭಟ್ಟ ಎಂಬ ಕಾವ್ಯನಾಮದಿಂದ ಹಲವು ಕೃತಿಗಳನ್ನು ರಚಿಸಿದ್ದಾರೆ. ಕಥಾಸಂಕಲನ, ಪ್ರವಾಸ ಕಥನ ಮತ್ತಿತರ ಕೃತಿಗಳನ್ನು ರಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಾಕಿಯಲ್ಕಿ ಜನಿಸಿದ ಭಟ್ ಅವರು ಉತ್ತಮ ಅರ್ಥಶಾಸ್ತ್ರಜ್ಞರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು, 1955ರಲ್ಲಿ ಐಆರ್ ಎಸ್ ಅಧಿಕಾರಿಯಾದರು. ಆದಾಯ ತೆರಿಗೆ ಆಯುಕ್ತರಾಗಿ ನಿವೃತ್ತರಾದ ಅವರು 1999ರಿಂದ ಧಾರವಾಡದಲ್ಲಿ ನೆಲೆಸಿದ್ದರು. ಗ್ರಾಹಕರ ವೇದಿಕೆ ಅಧ್ಯಕ್ಷರಾಗಿದ್ದ ಅವರು ಗ್ರಾಹಕ ಹಕ್ಜುಗಳ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿದ್ದರು.
ಸಾಹಿತಿ ಎನ್ ಪಿ ಭಟ್ ನಿಧನ
Follow Us