newsics.com
ಉಡುಪಿ: ಕಡಲ ಕಿನಾರೆಯನ್ನು ಸ್ವಚ್ಛಗೊಳಿಸಿದ ಉಡುಪಿಯ ನವದಂಪತಿಯ ಕಾರ್ಯವನ್ನು ಪ್ರಧಾನಿ ಮೋದಿ 2020ರ ಸಾಲಿನ ಕೊನೆಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.
ಸೋಮೇಶ್ವರ ಬೀಚ್ ನಲ್ಲಿದ್ದ 800 ಕೆ.ಜಿ ಗೂ ಅಧಿಕ ಕಸವನ್ನು ತೆಗೆದು ಸ್ವಚ್ಛಗೊಳಿಸಿದ ಅನುದೀಪ್ ಹಾಗೂ ಮಿನುಶಾ ಜೋಡಿಯನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಬೈಂದೂರು ಮೂಲದ ಕಳವಾಡಿಯ ಅನುದೀಪ್ ಮತ್ತು ಮಿನುಷಾ ಕಾಂಚನ್ ನವಜೋಡಿಗಳು ತಮ್ಮ ಪರಿಸರ ಕಾಳಜಿಯಿಂದ ಕಳೆದ ನವೆಂಬರ್ 27ರಿಂದ ಸೋಮೇಶ್ವರ ಕಡಲ ತೀರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಈ ಕುರಿತು ಟ್ಟೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಡುಪಿ ಮೂಲದ ಅನುದೀಪ್ ಹಾಗೂ ಮಿನುಶಾ ಜೋಡಿಯನ್ನು ಅಭಿನಂದಿಸಿದ್ದಾರೆ.
ಹನಿಮೂನ್ ಬದಲು ಬೀಚ್ ಕ್ಲೀನ್ ಮಾಡಿದ ನವದಂಪತಿ!
ಈ ಬಾರಿ ದೇಶಕ್ಕೂ ಹೊಸ ವರ್ಷದ ಶುಭಾಶಯ ಹೇಳೋಣ- ಮನ್ ಕಿ ಬಾತ್’ನಲ್ಲಿ ಮೋದಿ
$22 ದಶಲಕ್ಷಕ್ಕೆ ಮೈಕೆಲ್ ಜಾಕ್ಸನ್ ಎಸ್ಟೇಟ್ ಮಾರಾಟ!
ಭಾರತೀಯ ನೃತ್ಯ ಇತಿಹಾಸಕಾರ, ಹಿರಿಯ ವಿದ್ವಾಂಸ ಸುನಿಲ್ ಕೊಠಾರಿ ಇನ್ನಿಲ್ಲ
ಬ್ರಾಡೀ ಲೀ ಖ್ಯಾತಿಯ ಜಾನ್ ಹ್ಯೂಬರ್ ಇನ್ನಿಲ್ಲ