ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೀವನಗಾಥೆ ಯಕ್ಷಗಾನ ರೂಪವನ್ನೂ ಪಡೆದುಕೊಂಡಿದೆ. ಮೋದಿ ಅವರ ಜೀವನ ಚರಿತ್ರೆಯ ಕಾಲ್ಪನಿಕ ಕಥಾಪ್ರಸಂಗ ‘ನರೇಂದ್ರ ವಿಜಯ’ ಜ.5 ರ ಸಂಜೆ 6.30 ಕ್ಕೆ ಮಂಗಳೂರಿನ ಟಿ.ವಿ ರಮಣ ಪೈ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
‘ನರೇಂದ್ರ ವಿಜಯ’ ಯಕ್ಷಗಾನ ಕಥಾಪ್ರಸಂಗವನ್ನು ತೀರ್ಥಹಳ್ಳಿಯ ಜ್ಯೋತಿ ಶಾಸ್ತ್ರಿ ಬರೆದಿದ್ದಾರೆ. ನರೇಂದ್ರ ಮೋದಿಯವರ ಬಾಲ್ಯ, ಜೀವನಶೈಲಿ, ರಾಜಕೀಯ ಹಿನ್ನೆಲೆ ಸೇರಿದಂತೆ ಅವರ ಬದುಕಿನ ಹಲವು ಘಟ್ಟಗಳು ಪ್ರಸ್ತಾಪವಾಗಿವೆ.
ಜ್ಯೋತಿ ಶಾಸ್ತ್ರಿ, ವರದ ಐತಾಳ್, ಮಯೂರಿ ಉಪಾಧ್ಯಾಯ, ನಿರ್ಮಲಾ ಗೋಳಿಕೊಪ್ಪ, ಸವಿತಾ ಭಟ್, ಶಾರ್ವಣಿ ಭಟ್, ನಳಿನಿ ರಾವ್, ದಿಶಾ ಜೋಯಿಸ್, ಮಲ್ಲಿಕಾ ರಾಘವೇಂದ್ರ ಭಟ್ ಮೊದಲಾದವರು ಅಭಿನಯಿಸಲಿದ್ದಾರೆ. ಭಾಗವತರಾಗಿ ನಾಗೇಶ ಕುಲಾಲ್ ನಾಗರಕೊಡಿಗೆ, ಎನ್. ಜಿ.ಹೆಗ್ಡೆ ಮದ್ದಳೆ, ಕೃಷ್ಣಮೂರ್ತಿ ಚೆಂಡೆ ನುಡಿಸಲಿದ್ದಾರೆ.
ಜ.5 ರಂದು ಮಂಗಳೂರಲ್ಲಿ ಮೋದಿ ಬದುಕಿನ ಯಕ್ಷಗಾನ ‘ನರೇಂದ್ರ ವಿಜಯ’
Follow Us