ಬೆಳಗಾವಿ: ಮೂರು ದಿನಗಳ ರಾಷ್ಟ್ರೀಯ ಜೈನ್ ವಿದ್ವತ್ ಸಮ್ಮೇಳನ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿ ಶುಕ್ರವಾರ ಸಂಜೆ ಉದ್ಘಾಟನೆಗೊಂಡಿತು.
ವಸಂತ ನಿಲಜಗಿ ಸಭಾಮಂಟಪಕ್ಕೆ ಮಹಾವೀರ ನಿಲಜಗಿ ದಂಪತಿ ಪೂಜೆ ಸಲ್ಲಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಆಚಾರ್ಯ ಶ್ರೀ ಶಾಂತಿಸಾಗರ ಮುನಿದೀಕ್ಷಾ ಶತಾಬ್ದಿ ವತಿಯಿಂದ ಡಿ.೩೦ರವರೆಗೆ ಈ ಸಮ್ಮೇಳನ ನಡೆಯಲಿದೆ.
ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಹೊಂಬುಜ ಜೈನ ಮಠದ ಜಗದ್ಗರು ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಜೈನ ಬಿಹಾರ ಅಧ್ಯಕ್ಷತೆ ವಹಿಸಿದ್ದರು. ಆಸಾಂ ಕೇಂದ್ರೀಯ ವಿವಿ ಕುಲಪತಿ ವಿನೋದ ಜೈನ್ ಹಾಗೂ ಬಳ್ಳಾರಿ ವಿವಿ ಕುಲಪತಿ ಸಿದ್ದು ಅಲಗೂರ ಉಪಸ್ಥಿತರಿದ್ದರು.
ಕರ್ನಾಟಕ, ಮಹಾರಾಷ್ಟ್ರ ರಾಜಸ್ಥಾನ, ಬಿಹಾರ, ಜಾರ್ಖಂಡ್ ರಾಜ್ಯಗಳಿಂದ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದರು.
ಹುಕ್ಕೇರಿಯಲ್ಲಿ ರಾಷ್ಟ್ರೀಯ ಜೈನ್ ವಿದ್ವತ್ ಸಮ್ಮೇಳನ ಆರಂಭ
Follow Us