newsics.com
ಬೆಂಗಳೂರು: ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವ ರಾಜ್ಯದ ನಾಲ್ವರು ಸಚಿವರು ಇಂದು ತಮ್ಮನ್ನು ಜನರಿಗೆ ಪರಿಚಯಿಸುವ ಯಾತ್ರೆ ಆರಂಭಿಸಲಿದ್ದಾರೆ.
ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಂಡ್ಯದಲ್ಲಿ ಇಂದು ಯಾತ್ರೆ ನಡೆಸಲಿದ್ದಾರೆ.
ಪ್ರತಿಯೊಬ್ಬ ಕೇಂದ್ರ ಸಚಿವರು ಕನಿಷ್ಟ 400 ಕಿಲೋ ಮೀಟರ್ ದೂರ ಯಾತ್ರೆಯಲ್ಲಿ ಸಾಗಬೇಕು. ಆ ಬಳಿಕವಷ್ಟೇ ತಮ್ಮ ಸ್ವಕ್ಷೇತ್ರ ತಲುಪಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಸಂಸತ್ತಿನಲ್ಲಿ ಪ್ರತಿಪಕ್ಷಗಳು ತೋರಿಸಿದ ವರ್ತನೆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂಬುದು ಯಾತ್ರೆಯ ಕಾರ್ಯಸೂಚಿ.
ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಲು ಪ್ರತಿಪಕ್ಷಗಳು ಅವಕಾಶ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಈ ವೇಳೆ , ಈ ರಾಜಕೀಯ ಯಾತ್ರೆ ಬೇಕಿತ್ತೇ ಎಂಬ ಪ್ರಶ್ನೆ ಕೂಡ ಎದ್ದಿದೆ.