newsics.com
ಮಂಗಳೂರು: ವಿಶ್ವದ ಅತಿದೊಡ್ಡ ಕಂಟೈನರ್ ಹಡಗುಗಳಲ್ಲಿ ಒಂದಾಗಿರುವ ‘ಎಂಎಸ್ಸಿ ಎರ್ಮಿನಿಯಾ’ ಹಡಗು ನವಮಂಗಳೂರು ಬಂದರಿಗೆ ಬಂದಿದೆ. ಮೊದಲ ಮೈನ್ಲೈನ್ ಕಂಟೈನರ್ ಹಡಗು ಆಗಮಿಸುವ ಮೂಲಕ ಎನ್ಎಂಪಿಎ ಬಂದರು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಹಡಗು 276.5 ಮೀಟರ್ ಉದ್ದವಿದೆ ಎಂದು ಹೇಳಲಾಗಿದೆ.
ಮಂಗಳೂರಿಗೆ ಬಂದ ಎರ್ಮಿನಿಯಾ ಹಡಗನ್ನು ಜಲಫಿರಂಗಿ ಮೂಲಕ ಸ್ವಾಗತಿಸಲಾಯಿತು. ಕಂಟೈನರ್ ನಿರ್ವಹಣೆಗೆ ಎನ್ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಭಾನುವಾರ ಸಂಜೆ ಆಗಮಿಸಿದ ಈ ಹಡಗು, ಸರಕುಗಳನ್ನು ಹೊತ್ತು ಇಂದು ಅಥವಾ ನಾಳೆ ನಿರ್ಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ.