ಬೆಂಗಳೂರು: ರಾಜ್ಯದ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆಯಾಗಲಿದೆ. ಕೆಲವೇ ಗಂಟೆಗಳಲ್ಲಿ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ. ಪ್ರಮುಖವಾಗಿ ಪ್ರಸಕ್ತ ಸಚಿವರು ಹೊಂದಿರುವ ಹೆಚ್ಚುವರಿ ಖಾತೆಗಳು ನೂತನ ಸಚಿವರಿಗೆ ಹಂಚಿಕೆಯಾಗುವ ಸಾಧ್ಯತೆಗಳೇ ಜಾಸ್ತಿಯಾಗಿವೆ. ಜಲ ಸಂಪನ್ಮೂಲ ಸಚಿವ ಪದವಿ ಅಲಂಕರಿಸಲು ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದು ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ. ಈ ಮಧ್ಯೆ ನೂತನ ಸಚಿವ ಗೋಪಾಲಯ್ಯ ಮುಂಜಾನೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ