Wednesday, July 6, 2022

ಜುಲೈ 22ರಿಂದ ಬೆಂಗಳೂರಿನಲ್ಲಿ ಲಾಕ್​ಡೌನ್ ಇಲ್ಲ

Follow Us

ಬೆಂಗಳೂರು: ಬುಧವಾರದಿಂದ (ಜುಲೈ 22) ಬೆಂಗಳೂರಿನಲ್ಲಿ ಲಾಕ್​ಡೌನ್ ಇರುವುದಿಲ್ಲ.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಸಭೆ ನಂತರ ಮಾತನಾಡಿದ ಸುಧಾಕರ್ ಅವರು, ಬುಧವಾರ ಬೆಳಗ್ಗೆ ಲಾಕ್​ಡೌನ್ ಮುಕ್ತಾಯವಾಗಲಿದೆ. ನಂತರ ಈ ಹಿಂದೆ ಇದ್ದ ರೀತಿಯಲ್ಲಿಯೂ ಕೊರೋನಾ ಮಾರ್ಗಸೂಚಿಯಂತೆ ಜನಜೀವನಕ್ಕೆ ಅವಕಾಶವಿರಲಿದೆ. ಭಾನುವಾರದ ಲಾಕ್​ಡೌನ್ ಹಾಗೂ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಮುಂದುವರೆಯಲಿದೆ.
ಸೋಮವಾರ ನಡೆದ ಸಭೆಯಲ್ಲಿ ವಲಯವಾರು ಉಸ್ತುವಾರಿಗಳಿಂದ ಸಿಎಂ ವಿಸ್ತೃತ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಲಯವಾರು ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಎನ್ ಹೆಚ್ ಎಂ ಅಡಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಗೆ 25 ಸಾವಿರ ಇದ್ದ ವೇತನವನ್ನು 45 ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರದಿಂದಲೇ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!